3:50 AM Saturday 24 - January 2026

ಮಂತ್ರಿಯಾಗಿದ್ದವನು ಮಾಜಿಯಾಗಿದ್ದೇನೆ,  ನನ್ನ ಹಣೆ ಬರಹ ಸರಿಯಿಲ್ಲ | ಎಂಟಿಬಿ ನಾಗರಾಜ್ ಬೇಸರ

28/11/2020

ಬೆಂಗಳೂರು: ನಾನು ಮಂತ್ರಿಯಾಗಿದ್ದವ. ಆದರೆ ಈಗ ಮಾಜಿಯಾಗಿದ್ದೇನೆ. ನನ್ನ ಹಣೆ ಬರಹ ಸರಿಯಿಲ್ಲ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ನಿರಾಸೆ ವ್ಯಕ್ತಪಡಿಸಿದ್ದಾರೆ.

ವಿಧಾನಪರಿಷತ್ ಸದಸ್ಯರಾಗಿ ಐದು ತಿಂಗಳಾಯಿತು. ನನಗೆ ಮಂತ್ರಿಯಾಗುವ ಅದೃಷ್ಟ ಕೂಡಿಬಂದಿಲ್ಲ. ಯಾವಾಗ ಅದೃಷ್ಟ ಕೂಡಿಬರುತ್ತದೆಯೋ ಗೊತ್ತಿಲ್ಲ. ನನ್ನ ಹಣೆಬರಹ ಸರಿ ಇಲ್ಲದಿದ್ದಾಗ ಯಾರೂ ಏನು ಮಾಡಲು ಸಾಧ್ಯವಿಲ್ಲ. ಏನೇನಾಗುತ್ತದೆಯೋ ಆಗಲಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.


ದೆಹಲಿಗೆ ಹೋಗೋಣ ಎಂದು ಮುಖ್ಯಮಂತ್ರಿಗೆ ನಾನೇ ಹೇಳಿದ್ದೇನೆ. ಅವರು ಬಿಡುವು ಮಾಡಿಕೊಂಡು ಹೋಗೋಣ ಎಂದು ಹೇಳಿದ್ದಾರೆ. ಸಮಯ ಯಾವಾಗ ಕೂಡಿಬರುತ್ತದೆಯೋ ಗೊತ್ತಿಲ್ಲ. ಅಲ್ಲಿಯ ತನಕ ಕಾಯಲೇಬೇಕಲ್ಲವೆ ಎಂದು ಅವರು ತಮ್ಮ ಅಸಹಾಯಕತೆ  ಹೊರ ಹಾಕಿದರು.

 

ಇತ್ತೀಚಿನ ಸುದ್ದಿ

Exit mobile version