5:43 PM Wednesday 10 - December 2025

ನಾನು ಮತ್ತೆ ಎದ್ದು ಬರಲು ಸಾಧ್ಯನಾ? ಎಂದು ಯೋಚಿಸಿದ್ದರಂತೆ ಸುದೀಪ್!

sudeep
15/05/2021

ಸಿನಿಡೆಸ್ಕ್:  ಇತ್ತೀಚೆಗಷ್ಟೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಿಚ್ಚ ಸುದೀಪ್ ಅವರಿಗೆ ಏನಾಗಿದೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದ ವಿಚಾರ ಯಾರಿಗೂ ತಿಳಿದಿರಲಿಲ್ಲ.

ಆದರೆ, ಕಿಚ್ಚ ಸುದೀಪ್ ಅವರು ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಅವರ ಮನಸ್ಸಿನೊಳಗೆ ಏನೇನು ಓಡಾಡಿತ್ತು ಎನ್ನುವುದನ್ನು  ಅವರು ಗುಣಮುಖರಾದ ಬಳಿಕ ಹಂಚಿಕೊಂಡಿದ್ದಾರೆ.

ಕೊರೊನಾಗೆ ನಾನು ಯಾರು ಎನ್ನುವುದು ಮುಖ್ಯವಾಗುವುದಿಲ್ಲ. ಸೂಪರ್ ಮ್ಯಾನ್, ಬ್ಯಾಟ್ಸ್ ಮ್ಯಾನ್ ಯಾರೇ ಆಗಲಿ, ಆ ನೋವು ಸಂಕಷ್ಟದ ಮುಂದೆ ನಾವು ಯಾರೂ ಸೂಪರ್ ಅಲ್ಲ ಎಂದು ಸುದೀಪ್ ತಮ್ಮ ಅನುಭವದ ಮಾತು ಹೇಳಿದರು.

ಚಿಕಿತ್ಸೆ ಪಡೆಯುತ್ತಿದ್ದ ವೇಳೆ, ನಾನು ಮತ್ತೆ ಎದ್ದು ಬರಲು ಸಾಧ್ಯನಾ? ನನ್ನನ್ನು ಪ್ರೀತಿಸುವವರನ್ನು ನೋಡುತ್ತೇನೆಯೇ, ಸ್ನೇಹಿತರ ಜೊತೆಗೆ ಮತ್ತೆ ಮಾತನಾಡುತ್ತೇನೆಯೇ?  ನನ್ನ ಬಂಧು-ಬಳಗ ಎಲ್ಲರ ಜೊತೆಗೆ ಮಾತನಾಡಲು ಆಗುತ್ತದೆಯೇ ಎನ್ನು ಆಲೋಚನೆಗಳು ಬಂದವು. ಎಲ್ಲೋ ಒಂದು ಕಡೆ ಭಯವೂ ಆಯಿತು ಎಂದು ಸುದೀಪ್ ಹೇಳಿದರು.

ನಮ್ಮ ಮನಸ್ಥಿತಿ ಎಷ್ಟು ಗಟ್ಟಿಯಾಗಿದೆ ಎನ್ನುವುದನ್ನು ನಾವು ತಿಳಿಯುವುದು ಇಂತಹ ಸಂದರ್ಭದಲ್ಲಿಯೇ ಎಂದು ಸುದೀಪ್ ಹೇಳಿದರು. ಇದರ ಜೊತೆಗೆ ಕೊರೊನಾದಿಂದ ಪಾರಾಗಲು ಜನರು ಏನು ಮಾಡಬೇಕು ಎಂದು ಟಿಪ್ಸ್ ನೀಡಿದ್ದು, ಹೃದಯ ಬಡಿತ ಹೆಚ್ಚಿಸುವ ಕೆಲಸ ಮಾಡಬೇಡಿ. ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಬೇಕು. ಶರೀರಕ್ಕೆ ಬಲ ಬೇಕಾದರೆ, ಹೊಟ್ಟೆ ತುಂಬಾ ಊಟ ಮಾಡಬೇಕು ಎಂದರು.

ಇತ್ತೀಚಿನ ಸುದ್ದಿ

Exit mobile version