5:38 PM Saturday 18 - October 2025

ಕೋವಿಡ್ ವ್ಯಾಕ್ಸಿನ್ ಉತ್ಪಾದನೆಯಾಗದಿದ್ದರೆ ನಾವೇನು ನೇಣು ಹಾಕಿಕೊಳ್ಳಬೇಕೇ? | ಸದಾನಂದ ಗೌಡ ಪ್ರಶ್ನೆ

sadananda gowda
13/05/2021

ಬೆಂಗಳೂರು: ಕೋವಿಡ್ ವ್ಯಾಕ್ಸಿನ್ ಉತ್ಪಾದನೆಯಾದೇ ಹೋದರೆ ನಾವೇನು ನೇಣುಹಾಕಿಕೊಳ್ಳಲಾಗುತ್ತದೆಯೇ? ಎಂದು ಕೇಂದ್ರ ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಪ್ರಶ್ನಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಅಗತ್ಯಕ್ಕನುಸಾರವಾಗಿ ಸಾಕಷ್ಟು ಪ್ರಮಾಣದಲ್ಲಿ ಕೋವಿಡ್ ವ್ಯಾಕ್ಸಿನ್ ಉತ್ಪಾದನೆಯಾದೇ ಹೋದರೆ ನಾವೇನು ನೇಣುಹಾಕಿಕೊಳ್ಳಲಾಗುತ್ತದೆಯೇ? ಎಂದು ಕೇಂದ್ರ ಸರ್ಕಾರದ ಅಸಹಾಯಕತೆಯನ್ನು ಹೊರ ಹಾಕಿದರು.

ಹೈಕೋರ್ಟ್ ಆದೇಶದಂತೆ ಕೇಂದ್ರವಿನ್ನೂ ಪೂರ್ತಿಯಾಗಿ ಕರ್ನಾಟಕಕ್ಕೆ ವ್ಯಾಕ್ಸಿನ್ ಪೂರೈಸಿಲ್ಲವಲ್ಲ ಎಂಬ ಪ್ರಶ್ನೆಗೆಮಾತನಾಡಿದ ಡಿವಿಎಸ್, ನ್ಯಾಯಾಲಯ ಇಷ್ಟು ವ್ಯಾಕ್ಸಿನ್ ಕೊಡಿ ಅಷ್ಟು ಕೊಡಿ ಎಂದು ಹೇಳುತ್ತದೆ.ಕೋರ್ಟ್ ಹೇಳಿದೆಯೆಂದ ಮಾತ್ರಕ್ಕೆ ವ್ಯಾಕ್ಸಿನ್ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿ ಮಾಡಲಾಗದಿದ್ದರೆ ನೇಣುಹಾಕಿಕೊಳ್ಳಬೇಕೇ? ಎಂದು ಪ್ರಶ್ನಿಸಿದರು.

ಕಳೆದ ಬುಧವಾರದವರೆಗೆ ಕರ್ನಾಟಕದಲ್ಲಿ ಇನ್ನು 98,000ಡೋಸ್ ವ್ಯಾಕ್ಸಿನ್ ಸಂಗ್ರಹವಿದೆ.ಕೇಂದ್ರದಿಂದ ಇನ್ನು 75,000ಡೋಸ್ ಬರಬೇಕಾಗಿದೆ.ಇದುವರೆ ಒಂದು ಕೋಟಿ ಹದಿನೆಂಟು ಲಕ್ಷಕ್ಕು ಹೆಚ್ಚು ವ್ಯಾಕ್ಸಿನ ಕೊಡಲಾಗಿದೆ.ನೇರವಾಗಿ ಪ್ರಧಾನಿಯವರೇ ವ್ಯಾಕ್ಸಿನೇಷನ್ ಅಭಿಯಾನದ ಉಸ್ತುವಾರಿ ವಹಿಸಿದ್ದಾರೆ.ಇನ್ನು ಒಂದು ವಾರದೊಳಗೆ ಗೊಂದಲಗಳು ಬಗೆ ಹರಿಯುತ್ತದೆ.ಅದಕ್ಕಾಗಿಯೇ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನಿಲ್ಲಿಸಲಾಗಿದೆ.ನಲವತ್ತೈದು ವರ್ಷ ಮೇಲ್ಪಟ್ಟವರಿಗೆ ಈಗ ವ್ಯಾಕ್ಸಿನೇಷನ್ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದರು.

ಇತ್ತೀಚಿನ ಸುದ್ದಿ

Exit mobile version