ಕರ್ನಾಟಕ, ಮಹಾರಾಷ್ಟ್ರ, ಬಿಹಾರದಲ್ಲಿ ಎನ್.ಡಿ.ಎ ಕೂಟಕ್ಕೆ ಭಾರೀ ಹಿನ್ನಡೆ: ವಿಶ್ಲೇಷಣೆ

ಕರ್ನಾಟಕ, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಎನ್.ಡಿ.ಎ ಕೂಟಕ್ಕೆ ಭಾರೀ ಹಿನ್ನಡೆ ಆಗಲಿದೆ ಎಂದು ಪ್ರಮುಖ ಚುನಾವಣಾ ವಿಶ್ಲೇಷಕ ಮತ್ತು ಬರಹಗಾರ ರುಚಿರ್ ಶರ್ಮ ಹೇಳಿದ್ದಾರೆ. ಇಂಡಿಯಾ ಟುಡೇ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ದೇಶಾದ್ಯಂತ ಸಂಚರಿಸಿ ಚುನಾವಣೆಯ ಬಗ್ಗೆ ವಿಶ್ಲೇಷಣೆ ನಡೆಸುವ ವ್ಯಕ್ತಿಯಾಗಿ ರುಚಿರ್ ಶರ್ಮ ಗುರುತಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್ ಸಿಪಿ ಯ ವಿಭಜನೆಯು ಬಿಜೆಪಿಗೆ ತಿರುಗೇಟು ನೀಡಲಿದೆ ಎಂದು ಕೂಡ ಅವರು ಹೇಳಿದ್ದಾರೆ.
ಹಾಗೆಯೇ ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಕೊನೆ ಕ್ಷಣದಲ್ಲಿ ದಿಡೀರನೆ ಮೈತ್ರಿ ಮುರಿದು ಎನ್ ಡಿಎ ಪಾಳಯ ಸೇರಿಕೊಂಡಿರುವುದು ಕೂಡ ತಿರುಗೇಟಾಗಿ ಪರಿಣಮಿಸಲಿದೆ ಎಂದವರು ಹೇಳಿದ್ದಾರೆ. ದಕ್ಷಿಣದಲ್ಲಿ ಆಂಧ್ರಪ್ರದೇಶದಲ್ಲಿ ಮಾತ್ರ ಬಿಜೆಪಿಗೆ ಒಂದಷ್ಟು ಉಸಿರು ಬಿಡುವ ವಾತಾವರಣ ಇದೆ ಎಂದವರು ಹೇಳಿದ್ದಾರೆ. ಕರ್ನಾಟಕ ಆಂಧ್ರ ಪ್ರದೇಶ ತೆಲಂಗಾಣ ಮಹಾರಾಷ್ಟ್ರ ಬಿಹಾರ ಮುಂತಾದ ರಾಜ್ಯಗಳನ್ನು ಸುತ್ತಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth