ಪಕ್ಕದ ಮನೆಯ ದಂಪತಿ ಬೆಡ್‌ ರೂಮ್‌ ಕಿಟಕಿ ತೆರೆದು ಸರಸವಾಡ್ತಾರೆ: ಮಹಿಳೆಯಿಂದ ದೂರು

bangalore news
20/03/2024

ಬೆಂಗಳೂರು: ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ ದಾಖಲಾಗಿದ್ದು, ಪಕ್ಕದ ಮನೆಯ ದಂಪತಿ ಬೆಡ್‌ ರೂಮಿನ ಕಿಟಕಿ ತೆರೆದು ಸರಸ ಮಾಡುತ್ತಿದ್ದಾರೆ. ಇದರಿಂದ ತನಗೆ ತೊಂದರೆಯಾಗುತ್ತಿದೆ ಎಂದು ಮಹಿಳೆಯೊಬ್ಬರು ಗಿರಿನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರುದಾರ ಮಹಿಳೆ ಆವಲಗಳ್ಳಿ, ಬಿಡಿಎ ಲೇಔಟ್‌ ನಲ್ಲಿ ವಾಸವಿದ್ದಾರೆ. ಇವರ ಮನೆಯ ಬಾಗಿಲು ಪಕ್ಕದ ಮನೆಯವರ ಬೆಡ್‌ ರೂಮ್‌ ಗೆ ನೇರವಾಗಿದೆ. ಪಕ್ಕದ ಮನೆಯ ದಂಪತಿ ಕಿಟಕಿ ತೆರೆದೇ ಸರಸದಲ್ಲಿ ತೊಡಗುತ್ತಿದ್ದು, ವಿಕೃತ ಮತ್ತು ಅಸಹ್ಯದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ದಂಪತಿಯ ವರ್ತನೆಯಿಂದ ಮುಜುಗರಕ್ಕೀಡಾದ ಮಹಿಳೆ ಬೆಡ್‌ ರೂಮ್‌ ನ ಕಿಟಕಿ ಹಾಕಿಕೊಳ್ಳುವಂತೆ ಮನವಿ ಮಾಡಿದರೆ, ಪಕ್ಕದ ಮನೆಯ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ. ಆ ಮನೆಯ ಮಾಲಿಕ ಮತ್ತು ಆತನ ಮಗ ಮಹಿಳೆಯ ಕುಟುಂಬಸ್ಥರಿಗೆ ಹಲ್ಲೆಗೆ ಯತ್ನಿಸಿದ್ದಾರೆ. ಕೆಲವು ಯುವಕರನ್ನು ಕರೆಸಿ ಮಹಿಳೆಯ ಕುಟುಂಬಸ್ಥರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಇವರಿಂದ ಸೂಕ್ತ ರಕ್ಷಣೆ ನೀಡುವಂತೆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version