ಬೀದರ್: ಪ್ರತಾಪನಗರದಲ್ಲಿ ನೂತನ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನೆ

ಬೀದರ್: ಇಲ್ಲಿಯ ಪ್ರತಾಪನಗರದಲ್ಲಿ ನಿರ್ಮಿಸಿದ ನೂತನ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸೊದ್ದಿನ್ ಉದ್ಘಾಟಿಸಿದರು.
ಬಡಾವಣೆಯ ನಿವಾಸಿಗಳು ಭವನದ ಸದುಪಯೋಗ ಪಡೆಯಬೇಕು ಎಂದು ಅವರು ಹೇಳಿದರು.
ನಗರಸಭೆ ಸದಸ್ಯ ಸೂರ್ಯಕಾಂತ ಸಾಧುರೆ ಮಾತನಾಡಿ, ಎಸ್ ಸಿಪಿ, ಟಿಎಸ್ ಪಿಯ ರೂ. 10 ಲಕ್ಷ ಅನುದಾನದಲ್ಲಿ ಭವನ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಭವನ ನಿರ್ಮಾಣ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾಗಿತ್ತು. ಇದಕ್ಕಾಗಿ ನಿರಂತರ ಪ್ರಯತ್ನ ನಡೆಸಿದ್ದೆ. ಪೌರಾಡಳಿತ ಸಚಿವ ರಹೀಂಖಾನ್ ಅವರ ಮೇಲೆ ಒತ್ತಡ ತಂದಿದ್ದೆ. ಅದರ ಫಲವಾಗಿ ಭವನ ನಿರ್ಮಾಣವಾಗಿದೆ ಎಂದು ಹೇಳಿದರು.
ಆಣದೂರಿನ ವೈಶಾಲಿನಗರದ ಧಮ್ಮಾನಂದ ಮಹಾಥೆರೊ ಅವರು ಗೌತಮ ಬುದ್ಧರ ಕಂಚಿನ ಮೂರ್ತಿ ಅನಾವರಣಗೊಳಿಸಿದರು.
ಹುಮನಾಬಾದ್ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ, ನಗರಸಭೆ ಸದಸ್ಯರಾದ ಪ್ರಶಾಂತ ದೊಡ್ಡಿ, ವೀರಶೆಟ್ಟಿ ಭಂಗೂರೆ, ಮಹಾದೇವಿ ಹುಮನಾಬಾದೆ, ಅನಿಲ್ ಗಂಜಕರ್, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿನೋಕುಮಾರ ಅಪ್ಪೆ, ಮುಖಂಡರಾದ ಕಾಶೀನಾಥ ಚಲುವಾ, ಅಂಬರೀಷ್ ಸ್ವಾಮಿ, ಜೈಶಾಲಿನಿ ಮುಡಬಿ, ಮಂಗಲಾ ವಾಘಮಾರೆ ಮತ್ತಿತರರು ಇದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97