ಕಾಂಪೌಂಡ್ ಮೇಲಿನ ಮೊನಚಾದ ಗ್ರಿಲ್ ಗೆ  ನವಜಾತಶಿಶುವಿನ ಮೃತದೇಹ ಚುಚ್ಚಿದ  ಪಾಪಿಗಳು!

haryan
02/03/2024

ಫರಿದಾಬಾದ್: ನವಜಾತ ಶಿಶುವಿನ ಮೃತದೇಹವೊಂದು ಕಾಂಪೌಂಡ್ ವೊಂದರ ಮೊನಚಾದ ಬೇಲಿಯ ಮೇಲೆ ಸಿಕ್ಕಿಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹರ್ಯಾಣದ  ಅಜ್ರೊಂಡಾ ಗ್ರಾಮದಲ್ಲಿ ನಡೆದಿದೆ.

ಇಂದು ಬೆಳಗ್ಗೆ ನವಜಾತಶಿಶುವಿನ ಮೃತದೇಹ ಕಾಂಪೌಂಡ್ ನ ಮೇಲಿನ ರಾಡ್ ನಂತಂಹ ಚೂಪಾದ ಬೇಲಿಯಲ್ಲಿ ಚುಚ್ಚಿಕೊಂಡಿರುವ ದೃಶ್ಯವನ್ನು  ಸ್ಥಳೀಯ ನಿವಾಸಿಗಳು ನೋಡಿ ಬೆಚ್ಚಿಬಿದ್ದಿದ್ದಾರೆ.

ಬಳಿಕ ಮೃತದೇಹವನ್ನು ಹೊರತೆಗೆದು ಫರಿದಾಬಾದ್ ನ ಬಾದ್ ಶಾ ಖಾನ್ ಸಿವಿಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಶಿಶುವನ್ನು ಕೊಂದು ಗ್ರಿಲ್ ಗೆ ಚುಚ್ಚಲಾಗಿದೆಯೇ ಅಥವಾ ಜೀವಂತವಾಗಿಯೇ ಗ್ರಿಲ್ ಗೆ ಚುಚ್ಚಿದ್ದಾರೆಯೇ ಎನ್ನುವುದು ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದು ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯ ನಡೆಸಿದವರನ್ನು ಪತ್ತೆ ಹಚ್ಚಲು  ಪೊಲೀಸರು ಸುತ್ತಮುತ್ತಲಿನ ಸಿಸಿ ಕ್ಯಾಮರಾವನ್ನು ಪರಿಶೀಲನೆ ನಡೆಸುತ್ತಿದ್ದು, ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿದ್ದಾರೆ.

ಇತ್ತೀಚಿನ ಸುದ್ದಿ

Exit mobile version