ಬಿಎಸ್ ವೈ, ವಿಜಯೇಂದ್ರ ಮುಖ ನೋಡಿ ಯಾರೂ ಬಿಜೆಪಿಗೆ ಓಟು ಹಾಕಲ್ಲ ಎಂದ ಯತ್ನಾಳ್!

ಯಾದಗಿರಿ: ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರ ಮುಖ ನೋಡಿ ಜನರು ಓಟು ಹಾಕುವುದಿಲ್ಲ. ನರೇಂದ್ರ ಮೋದಿ ಅವರ ಮುಖ ನೋಡಿ ಓಟು ಹಾಕುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ನಾಯಕರ ವಿರುದ್ಧವೇ ವ್ಯಂಗ್ಯವಾಡಿದ್ದಾರೆ.
ಯಾದಗಿರಿಯಲ್ಲಿ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಿಂದೇ ಓಟು ಬರುತ್ತವೆ ಎಂಬುದು ಅಪ್ಪ-ಮಕ್ಕಳದ್ದು ಬರೀ ಕಲ್ಪನೆ ಎಂದು ವ್ಯಂಗ್ಯವಾಡಿದರು.
ನರೇಂದ್ರ ಮೋದಿ, ಭಾರತ, ಹಿಂದೂತ್ವ, ಅಯೋಧ್ಯೆ ರಾಮ ಮಂದಿರ ಮೇಲೆಯೇ ಚುನಾವಣೆ ನಡೆಯಲಿದೆ. ಕುತಂತ್ರಿಗಳು ಮಾಡಿಸುತ್ತಿರುವ ಗೋಬ್ಯಾಕ್ ಹಾಗೂ ಕಮ್ ಇನ್ ನಡೆಯಲ್ಲ. ತಮ್ಮ ಕುಟುಂಬದವರೇ ಕೇಂದ್ರದಲ್ಲಿ ಮಂತ್ರಿಯಾಗಬೇಕು. ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಬೇಕೆಂದು ಕಲ್ಪನೆಯಿಟ್ಟುಕೊಂಡು ಹೋಗುತ್ತಾರಲ್ಲ. ಇದು ಸಾಧ್ಯವಿಲ್ಲ ಎಂದರು.
ಇದು ನರೇಂದ್ರ ಮೋದಿ ಅವರ ಚುನಾವಣೆ. ಯಡಿಯೂರಪ್ಪನವರ ಚುನಾವಣೆಯಲ್ಲ. ಅವರಿಗೆ ಒಮ್ಮೆಯಾದರೂ 120 ಬಂದಿವೆಯೇ, ಅಪ್ಪ-ಮಕ್ಕಳು ಎಲ್ಲರನ್ನೂ ಮುಗಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ. ನನಗೂ ಲೋಕಸಭೆ ಚುನಾವಣೆಗೆ ನಿಲ್ಲಿ ಎಂದರು. ಬಾಗಲಕೋಟೆ, ಬೆಳಗಾವಿ, ಕೊಪ್ಪಳ ಎಲ್ಲಿಯಾದರೂ ನಿಲ್ಲಿ ಎಂದು ಚಾಯ್ಸ್ ಕೊಟ್ಟರು. ನಾನು ಕೇಂದ್ರದಲ್ಲಿ ಮಂತ್ರಿ ಮಾಡ್ತೀವಿ ಅಂದರೂ ನಿಲ್ಲೋದಿಲ್ಲ ಎಂದು ಹೇಳಿದ್ದೇನೆ. ನನ್ನನ್ನು ಇಲ್ಲಿಂದ ಕಳಿಸಬೇಕು ಅಂತಾರೆ. ನಾನು ದಿಲ್ಲಿಗೆ ಹೋದರೆ ಅಪ್ಪ-ಮಕ್ಕಳದೇ ರಾಜ್ಯ ನಡೆಯುತ್ತದೆ ಎಂದರು.ಯಾರು ಪಿತೂರಿ ಮಾಡಿದರೂ ನಾವು ಕಿತ್ತೂರು ವಂಶದವರೂ ಯಾರಿಗೂ ಅಂಜುವುದಿಲ್ಲ ಎಂದು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth
—