ಬಿಜೆಪಿ ಎಂಪಿಗಳು ಯಾರೂ ಗಂಡಸರಲ್ಲ: ಶಾಸಕ ಹೆಚ್.ಸಿ. ಬಾಲಕೃಷ್ಣ ಆಕ್ರೋಶ

balaksrisna
05/02/2024

ರಾಮನಗರ: ರಾಜ್ಯದ ಪರವಾಗಿ ರಾಜ್ಯದಿಂದ ಗೆದ್ದಿರುವ ಬಿಜೆಪಿ ಸಂಸದರು ಯಾರೂ ಧ್ವನಿ ಎತ್ತಿಲ್ಲ, ಇದರ ಅರ್ಥ ಬಿಜೆಪಿ ಸಂಸದರು ಯಾರೂ ಗಂಡಸರು ಇಲ್ಲ ಎಂದು ಬಿಜೆಪಿ ಸಂಸದರ ವಿರುದ್ಧ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಅನುದಾನ ತಾರತಮ್ಯ ನೀತಿಯ ವಿರುದ್ಧ ಬಿಜೆಪಿ ಸಂಸದರು ಧ್ವನಿ ಎತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನಮಗೆ ಕೊಡಬೇಕಾದ ಅನುದಾನವನ್ನು ಕೇಂದ್ರ ಸರ್ಕಾರ ಕೊಡುತ್ತಿಲ್ಲ, ಬಿಜೆಪಿ ಸಂಸದರು ಮೋದಿ ಮುಂದೆ ಕೂರೋದೂ ಇಲ್ಲ, ಏಳೋದೂ ಇಲ್ಲ, ಕೇವಲ ಮೋದಿ ಹೆಸರಲ್ಲಿ ಗೆಲ್ತಾರೆ, ತಮಿಳುನಾಡು ಸಂಸದರನ್ನ ನೋಡಿ ಕಲಿಯಲಿ ಎಂದು ಅವರು ವಾಗ್ದಾಳಿ ನಡೆಸಿದರು.

ಬಿಜೆಪಿಯ ಎಂಪಿಗಳು, ಮಂತ್ರಿಗಳು ರಾಜ್ಯದ ಪರವಾಗಿ ಧ್ವನಿ ಎತ್ತಿಲ್ಲ ಹಾಗಾಗಿ ದೆಹಲಿಯಲ್ಲಿ ನಾವು ಹೋರಾಟ ಮಾಡ್ತೀವಿ. ನಮ್ಮ ಹೋರಾಟ ನೋಡಿ ಬಿಜೆಪಿ ಗಂಡಸರು ಹೋರಾಟ ಮಾಡ್ತಾರಾ ನೋಡೋಣ, ಇದರ ಅರ್ಥ ಬಿಜೆಪಿಯಲ್ಲಿ ಗಂಡಸರು ಯಾರೂ ಇಲ್ಲ ಅಂತ, ಬಿಜೆಪಿ ಎಂಪಿಗಳು ಯಾರೂ ಗಂಡಸರಲ್ಲ ಎಂದು ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

Exit mobile version