ಒಡಿಶಾದ ಆರೋಗ್ಯ ಸಚಿವರ ಹತ್ಯೆ ಆರೋಪಿ ಮಾನಸಿಕ ಅಸ್ವಸ್ಥ!
ಭುವನೇಶ್ವರ: ಒಡಿಶಾದ ಆರೋಗ್ಯ ಸಚಿವ ನಬಾ ದಾಸ್ ಅವರನ್ನು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಗೋಪಾಲ್ ದಾಸ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ಅವರ ಪತ್ನಿ ಜಯಂತಿ ದಾಸ್ ಹೇಳಿದ್ದಾರೆ.
ಗೋಪಾಲ್ ದಾಸ್ ಕಳೆದ 8 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅವರಿಗೆ ಔಷಧೋಪಚಾರ ಮಾಡುತ್ತಿದ್ದು, ಅವರು ಆರೋಗ್ಯವಾಗಿದ್ದರು. ಅಂದು ಸುಮಾರು ಹೊತ್ತು ನನ್ನ ಮಗಳೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಇದ್ದಕ್ಕಿದ್ದಂತೆ ಸಂಪರ್ಕ ಕಡಿತಗೊಳಿಸಿದರು ಎಂದು ಆಕೆ ತಿಳಿಸಿದ್ದಾರೆ.
ನಬಾ ದಾಸ್ ಅವರ ಮೇಲೆ ಗುಂಡು ಹಾರಿಸಿರುವ ಬಗ್ಗೆ ನಾನು ಸುದ್ದಿ ಕೇಳಿದೆ. ನನಗೂ ಘಟನೆಯಿಂದ ಆಘಾತವಾಗಿದೆ. ಅವರು ಏಕೆ ಹೀಗೆ ಮಾಡಿದ್ದಾರೆ ಅನ್ನುವುದು ನನಗೆ ಗೊತ್ತಿಲ್ಲ, ನಾನು ಬೆಳಗ್ಗಿನಿಂದಲೂ ಅವರೊಂದಿಗೆ ಮಾತನಾಡಿಲ್ಲ ಎಂದು ಆಕೆ ತಿಳಿಸಿದ್ದಾರೆ.’
ನಿನ್ನೆ ಆರೋಗ್ಯ ಸಚಿವ ನಬಾ ದಾಸ್ ಅವರು ಜಾರ್ಸುಗುಡಾ ಜಿಲ್ಲೆಯ ಬ್ರಜರಾಜನಗರದಲ್ಲಿ ಕಾರ್ಯಕ್ರವೊಂದಕ್ಕೆ ಆಗಮಿಸಿದ್ದ ವೇಳೆ ಕಾರ್ಯಕರ್ತರ ಗುಂಪಿನ ನಡುವೆ ಬಂದ ಗೋಪಾಲ್ ದಾಸ್ ಸಚಿವರ ಮೇಲೆ ಗುಂಡು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರು ನಿಧನರಾಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























