ಕಚೇರಿ ಅನುಮೋದನೆ ವಾಪಸ್ ವಿಚಾರ: ವಿ.ಸೋಮಣ್ಣ ಪ್ರತಿಕ್ರಿಯೆ

somanna
16/08/2024

ಚಿಕ್ಕಮಗಳೂರು:  ಕೇಂದ್ರ ಸಚಿವ ಸೋಮಣ್ಣ ಅವರ ಕಚೇರಿ ಅನುಮೋದನೆ ವಾಪಸ್ ಪಡೆದು ರಾಜ್ಯ ಸರ್ಕಾರ ಶಾಕ್ ಹಿನ್ನೆಲೆ, ಬಾಳೆಹೊನ್ನೂರು ಮಠದಲ್ಲಿ ಕೇಂದ್ರ ಸಚಿವ ಸೋಮಣ್ಣ ಪ್ರತಿಕ್ರಿಯೆ ನೀಡಿದರು.

ನೋಡಪ್ಪ…ನಾನೊಬ್ಬ ಲೋಕಸಭಾ ಸದಸ್ಯ, ಕೇಂದ್ರ ಸಚಿವನಾಗಿದ್ದೇನೆ. ಬಹುತೇಕ ಕಡೆ ಮುಖ್ಯಮಂತ್ರಿಗಳೇ ಆದೇಶ ಮಾಡಿದ್ದಾರೆ,  50 ಲಕ್ಷ ಹಣವನ್ನು ಬಿಡುಗಡೆ ಮಾಡಿದ್ದಾರೆ. ಇವತ್ತು ಬೆಳಗ್ಗೆ ಪೂಜೆ ಮಾಡಿ ನಮ್ಮವರು ಕಚೇರಿಗೆ ಹೋಗಿದ್ದಾರೆ, ವಿಚಾರ ತಿಳಿಯದ ತಕ್ಷಣ ಮುಖ್ಯಮಂತ್ರಿಗಳಿಗೆ ಫೋನ್ ಮಾಡುತ್ತಿದ್ದೇನೆ ಅವರು ಸಿಗುತ್ತಿಲ್ಲ ಎಂದರು.

ನಾನೊಬ್ಬ ಕೇಂದ್ರ ಮಂತ್ರಿ ಅದು ನನ್ನ ಹಕ್ಕು, ಡಿಸಿ ಕಚೇರಿಯ 2–3ನೇ ಮಹಡಿಯಲ್ಲಿದ್ದ ಕಚೇರಿಗೆ ಸಾರ್ವಜನಿಕರು ಹೋಗಲು ಆಗುತ್ತಿರಲಿಲ್ಲ,  ಜನರ ಅನುಕೂಲಕ್ಕಾಗಿ ಕೇಳಿದ್ವಿ ಸಿಎಂ ಪರಿವೀಕ್ಷಣಾ ಮಂದಿರವನ್ನ ಕೊಟ್ಟಿದ್ದರು. ಇದರ ಹಿಂದೆ ಏನೇನು ನಡೆದಿದೆಯೋ ಗೊತ್ತಿಲ್ಲ ಎಂದರು.

ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮಠದಲ್ಲಿ ಸೋಮಣ್ಣ  ಪ್ರತಿಕ್ರಿಯೆ ನೀಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version