4:35 AM Wednesday 22 - October 2025

ದೇಶದ ಮೊದಲ ಎಐ ಸುದ್ದಿ ನಿರೂಪಕಿಯನ್ನು ಪರಿಚಯಿಸಿದ ಒಡಿಶಾ ಟಿವಿ ಸುದ್ದಿ ವಾಹಿನಿ..!

10/07/2023

ದೇಶದ ಮೊದಲ ಎಐ (artificial intelligence) ಸುದ್ದಿ ನಿರೂಪಕಿಯನ್ನು ಒಡಿಶಾ ಟಿವಿ ಸುದ್ದಿ ವಾಹಿನಿಯು ಪರಿಚಯಿಸಿದೆ. ಲೀಸಾ ಎಂಬ ಎಐ ನಿರೂಪಕಿ ಯಶಸ್ವಿಯಾಗಿ ಸುದ್ದಿ ಓದಿದ್ದಾರೆ.

ನೋಡಲು ಚೆಂದುಳ್ಳಿ ಚಲುವೆಯಾಗಿರುವ ಎಐ ಸುದ್ದಿ ನಿರೂಪಕಿ ಲೀಸಾ ಭಾರತೀಯ ಉಡುಗೆಯಲ್ಲಿ ಮಿಂಚಿದ್ದಾರೆ. ಲೀಸಾ ಚೆಂದವಾಗಿ, ಸ್ಪುಟವಾಗಿ ಇಂಗ್ಲಿಷ್‌ನಲ್ಲಿ ಸುದ್ದಿ ಓದಿದ್ದಾರೆ ಹಾಗೂ ಒಡಿಯಾ ಭಾಷೆಯಲ್ಲೂ ಸುದ್ದಿ ಓದಲಿದ್ದಾರೆ. ಒಡಿಶಾ ಟಿವಿಯ ಈ ಪ್ರಯೋಗಕ್ಕೆ ದೇಶದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಒಟಿವಿ ಟ್ವಿಟ್ ಮಾಡಿದೆ. ಒಟಿವಿಯ ಎಐ ನ್ಯೂಸ್ ನಿರೂಪಕಿ ಲೀಸಾ ಹಲವು ಭಾಷೆಗಳನ್ನು ಮಾತನಾಡಲಿದ್ದಾರೆ. ಇಂಗ್ಲಿಷ್ ಜತೆಗೆ ಒಡಿಯಾದಲ್ಲೂ ಡಿಜಿಟಲ್ ವೇದಿಕೆಗಳಲ್ಲಿ ಸುದ್ದಿ ನಿರೂಪಣೆ ಮಾಡಲಿದ್ದಾರೆ ಎಂದು ತಿಳಿಸಿದೆ. ಲೀಸಾಗೆ ತರಬೇತಿ ನೀಡುವುದು ದೊಡ್ಡ ವಿಷಯವಾಗಿತ್ತು. ಕೊನೆಗೂ ನಾವು ಲೀಸಾಗೆ ತರಬೇತಿ ನೀಡಿ, ಸುದ್ದಿಯನ್ನು ಜನರ ಮುಂದೆ ಇಟ್ಟಿದ್ದೇವೆ.

ಆದರೂ, ಕೃತಕ ಬುದ್ಧಿಮತ್ತೆ ಆಧಾರಿತ ಟಿವಿ ನಿರೂಪಕಿಗೆ ಇನ್ನಷ್ಟು ತರಬೇತಿ ನೀಡುತ್ತೇವೆ. ಮತ್ತಷ್ಟು ಬದಲಾವಣೆಗಳಿಗೆ ನಾವು ತೆರೆದುಕೊಳ್ಳುತ್ತೇವೆ. ಲೀಸಾ ಬೇರೆಯವರ ಜತೆ ಸಂವಾದ ಮಾಡುವಂತೆ ಮಾಡಿದ್ದೇವೆ ಎಂದು ಒಟಿವಿ ಡಿಜಿಟಲ್ ಬ್ಯುಸಿನೆಸ್ ಹೆಡ್ ಲಿತಿಶಾ ಮಂಗತ್ ಪಾಂಡಾ ತಿಳಿಸಿದ್ದಾರೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವ ದಿನೇ ದಿನೇ ಜಗತ್ತನ್ನು ಆವರಿಸಿಕೊಳ್ಳುತ್ತಿದೆ. ಇದರಿಂದಾಗಿ ಮಾನವ ಉದ್ಯೋಗಕ್ಕೆ ಕತ್ತರಿ ಬೀಳುತ್ತದೆ ಎಂಬ ಚರ್ಚೆಗಳು ಶುರುವಾಗಿವೆ. ಇದೀಗ ಟಿವಿ ಪರದೆಗೆ ಎಐ ಸುದ್ದಿ ನಿರೂಪಕಿ ಕಾಲಿಟ್ಟಿದ್ದು, ಮಾನವ ಸುದ್ದಿ ನಿರೂಪಕರ ಉದ್ಯೋಗದ ಮೇಲೂ ಪರಿಣಾಮ ಬೀರಲಿದ್ಯಾ ಎಂಬ ಪ್ರಶ್ನೆ ಮೂಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version