6:14 PM Wednesday 15 - October 2025

ಪಹಲ್ಗಾಮ್ ದಾಳಿ, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಆಲ್ದೂರು ಪಟ್ಟಣ ಬಂದ್!

Aldoor
03/05/2025

ಚಿಕ್ಕಮಗಳೂರು: ಪಹಲ್ಗಾಮ್ ದಾಳಿ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಇಂದು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ.

ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ಸಂಪೂರ್ಣ ಬಂದ್ ನಡೆಯಲಿದೆ. ಹಳ್ಳಿಗಳು, ಕೂಲಿ ಕಾರ್ಮಿಕರೇ ಹೆಚ್ಚಿರೋ ಆಲ್ದೂರು ಹೋಬಳಿಯ ಜನರು ಬಂದ್ ನಿಂದ ತೊಂದರೆ ಅನುಭವಿಸಲಿದ್ದಾರೆ.

ಬೆಳಗ್ಗೆ 7–8 ಗಂಟೆಗೆಲ್ಲಾ ವ್ಯಾಪಾರ–ವಹಿವಾಟು ಆರಂಭಗೊಳ್ಳುತ್ತಿತ್ತು. ಬಂದ್ ಹಿನ್ನೆಲೆ ಆಲ್ದೂರು ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ. ವಾರದ ಸಂತೆಯೂ ರದ್ದು ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣ ಸ್ತಬ್ಧವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version