7:39 AM Thursday 11 - December 2025

ಮಲಗಿದ್ದ ಪತಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಪತ್ನಿ

05/07/2022

ಬೆಳ್ತಂಗಡಿ: ಮಲಗಿದ್ದ ಪತಿಯನ್ನು, ಪತ್ನಿಯೇ ಹತ್ಯೆ ಮಾಡಿದ ಘಟನೆ ತಾಲೂಕಿನ ನಾವೂರು ಗ್ರಾಮದ ಅಬ್ಬನ್ ಕೆರೆ ಎಂಬಲ್ಲಿ ಜು.5ರ ಮಂಗಳವಾರ ಬೆಳಗ್ಗೆ ನಡೆದಿದೆ.

ನಾವೂರು ಗ್ರಾಮದ ಅರಣ್ಯ ಪ್ರವಾಸಿ ಮಂದಿರ ಬಳಿಯ ಅಬ್ಬನ್ ಕೆರೆ ದಂಪತಿಗಳು ವಾಸವಿದ್ದು, ಆರೋಪಿ ಪತ್ನಿ ನೆಲ್ಲಮ್ಮ (55) ಪತಿಯಾದ ಪೊಟಾಸ್ ಬೇಬಿ (60) ಅವರನ್ನು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಬಳಿಕ ಪತಿ ಬಳಿ ಪತ್ನಿ ಕತ್ತಿ ಹಿಡಿದು ಕುಳಿತ್ತಿದ್ದರು.

ಕೃಷಿಕ ದಂಪತಿಯಾಗಿರುವ ಇವರಿಗೆ ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರಿದ್ದು, ಪುತ್ರಿಗೆ ವಿವಾಹವಾಗಿದ್ದು, ಓರ್ವ ಪುತ್ರ ವಿದೇಶದಲ್ಲಿ, ಮತ್ತೋರ್ವ ಪುತ್ರ ಬೇರೆಡೆ ವಾಸವಾಗಿದ್ದಾರೆ. ಮನೆಯಲ್ಲಿ ಇಬ್ಬರೇ ಇದ್ದರು ಎಂದು ತಿಳಿದುಬಂದಿದೆ.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಪತ್ನಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಬೆಳ್ತಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಇತ್ತೀಚಿನ ಸುದ್ದಿ

Exit mobile version