9:59 AM Wednesday 15 - October 2025

ಪತ್ನಿಯ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದ ಯುವಕನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಪತಿ!

kerala news
27/07/2021

ಚೆಂಗನೂರ್: ತನ್ನ ಪತ್ನಿಯ ಪ್ರೇಮಿಯ ಖಾಸಗಿ ಅಂಗಕ್ಕೆ ಪತಿ ಗುಂಡು ಹಾರಿಸಿದ ವಿಲಕ್ಷಣ ಘಟನೆ ಕೇರಳದ ಚೆಂಗನೂರು ಜಿಲ್ಲೆಯಲ್ಲಿ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿದ್ದ ಪ್ರೇಮಿ ಇದೀಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಎಂದು ವರದಿಯಾಗಿದೆ.

ಆರೋಪಿಯ ಪತ್ನಿ ತನ್ನ ಪತಿಯನ್ನು ತ್ಯಜಿಸಿ ಪ್ರಿಯಕರನ ಮನೆಯಲ್ಲಿ ವಾಸಿಸುತ್ತಿದ್ದಳು. ಪತ್ನಿ ಇನ್ನೋರ್ವ ಯುವಕನ ಜೊತೆಗೆ ಸಂಬಂಧ ಹೊಂದಿದ್ದರಿಂದ ಕೋರ್ಟ್ ನಲ್ಲಿ ಡಿವೋರ್ಸ್ ಕೇಸ್ ಕೂಡ ಇವರ ನಡುವೆ ನಡೆಯುತ್ತಿತ್ತು ಎಂದು ಹೇಳಲಾಗಿದೆ.

ಈ ನಡುವೆ ಪತ್ನಿಯ ಪ್ರೇಮಿಯ ಮನೆಗೆ ಬಂದ ಆರೋಪಿ, 45 ವರ್ಷ ವಯಸ್ಸಿನ ಪ್ರೇಮಿಯ ಮರ್ಮಾಂಗಕ್ಕೆ ಏರ್ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾನೆ. ಘಟನೆಯಿಂದ ಪ್ರೇಮಿಯ ಖಾಸಗಿ ಅಂಗಕ್ಕೆ ಸಣ್ಣ ಗಾಯವಾಗಿದೆ. ಹೀಗಾಗಿ ಆತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಅಂದೇ ವಾಪಸ್ ಮನೆಗೆ ಬಂದಿದ್ದ. ಆದರೆ ಮನೆಗೆ ಬಂದ ಬಳಿಕ ನೋವು ತೀವ್ರವಾದ ಕಾರಣ ಆತ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಇನ್ನೂ ಗಾಯ ಹೇಗೆ ಆಗಿದೆ ಎಂದು ವೈದ್ಯರು ಪ್ರಶ್ನಿಸದ ವೇಳೆ ನಡೆದ ಘಟನೆಯನ್ನು ಪ್ರೇಮಿ ಅನಿವಾರ್ಯವಾಗಿ ಹೇಳಿದ್ದಾನೆ. ಇದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ.  ಇನ್ನೂ ಘಟನೆಯ ಬಗ್ಗೆ ಇನ್ನೂ ದೂರು ದಾಖಲಾಗಿಲ್ಲ ಎಂದು ಹೇಳಲಾಗಿದೆ.

ಇನ್ನಷ್ಟು ಸುದ್ದಿಗಳು…

 

ಹೊಸ ಸಿಎಂ ಹೆಸರು ಘೋಷಣೆಗೆ ಕೌನ್ ಡೌನ್ ಶುರು: ಇಂದು ರಾತ್ರಿಯೇ ಹೊಸ ಸಿಎಂ ಘೋಷಣೆ?

ಅಶ್ಲೀಲ ಚಿತ್ರ ನಿರ್ಮಾಣ: ಮಧ್ಯಂತರ ಜಾಮೀನು ಕೋರಿದ ಬಾಲಿವುಡ್ ನ ಮತ್ತೋರ್ವಳು ನಟಿ

ಯಡಿಯೂರಪ್ಪ ಕಣ್ಣೀರು ನೋಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ರಾಜಾಹುಲಿ!

ಷಡ್ಯಂತ್ರಗಳ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ!

ಇತ್ತೀಚಿನ ಸುದ್ದಿ

Exit mobile version