12:44 PM Tuesday 21 - October 2025

ಪತಿಯನ್ನು ಕಟ್ಟಿ ಹಾಕಿ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ | ಕೂಲಿ ಕಾರ್ಮಿಕ ದಂಪತಿಯ ಮೇಲೆ ಅಮಾನವೀಯ ಕೃತ್ಯ

26/12/2020

ಚಂಡೀಗಢ: ಪತಿಯನ್ನು ಕಟ್ಟಿಹಾಕಿ ಪತ್ನಿಯನ್ನು ಅತ್ಯಾಚಾರ ಮಾಡಿದ ಹೀನ ಕೃತ್ಯ ಹರ್ಯಾಣದ ಯಮುನಾನಗರದ ಗ್ರಾಮವೊಂದರಲ್ಲಿ ಗುರುವಾರ ರಾತ್ರಿ ನಡೆದಿದ್ದು, ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಯ ಮೇಲೆ ದುಷ್ಟರು ಎರಗಿದ್ದಾರೆ.

ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನೇಪಾಳ ಮೂಲದ ಬಡ ದಂಪತಿ ಇಲ್ಲಿನ ಕೊಳವೆ ಬಾವಿಯೊಂದರ ಬಳಿಯಲ್ಲಿ ವಾಸವಿದ್ದರು.  ಗುರುವಾರ ರಾತ್ರಿ ಮಹಿಳೆ ತನ್ನ 2 ವರ್ಷದ ಮಗುವಿನ ಜೊತೆಗೆ ಮನೆಯ ಒಳಗೆ ಮಲಗಿದ್ದು, ಆಕೆಯ ಪತಿ ಜಗುಲಿಯಲ್ಲಿ ಮಲಗಿದ್ದರು.

ತಡ ರಾತ್ರಿಯ ವೇಳೆ ಕಾರೊಂದರಲ್ಲಿ ಬಂದ ಐವರು, ಜಗುಲಿಯಲ್ಲಿದ್ದ ಪತಿಯನ್ನು ಕಟ್ಟಿಹಾಕಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನಾಲ್ವರು ಅತ್ಯಾಚಾರ ನಡೆಸಿದ ಬಳಿಕ 5ನೇಯ ವ್ಯಕ್ತಿ ಕೂಡ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ಸಂದರ್ಭದಲ್ಲಿ ಆಕೆ ತಳ್ಳಿದ್ದು, ಇದರಿಂದ ಹೆದರಿದ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಹಿಳೆ ತಕ್ಷಣವೇ ತನ್ನ ಪತಿಯನ್ನು ಬಂಧನದಿಂದ ಬಿಡಿಸಿದ್ದು, ಆ ಬಳಿಕ ಮನೆಯ ಮಾಲಕರಿಗೆ ತಿಳಿಸಿದ್ದಾರೆ. ಅವರು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ನೀಡಿಸಿದ್ದಾರೆ. ಐವರ ವಿರುದ್ಧ ವಿವಿಧ ಕಠಿಣ ಪ್ರಕರಣಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಶೋಧ ಆರಂಭಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version