ಹುಲಿಯ ದಾಳಿಗೆ ಬೆಚ್ಚಿಬಿದ್ದ ಜನ: ಐದು ಹಸುಗಳನ್ನು ಕೊಂದು ಹಾಕಿದ ವ್ಯಾಘ್ರ!

ಚಿಕ್ಕಮಗಳೂರು: ಹುಲಿಯ ದಾಳಿಗೆ ಐದು ಹಸುಗಳು ಬಲಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ಕಠಾರದಹಳ್ಳಿಯಲ್ಲಿ ನಡೆದಿದೆ.
ಚಂದ್ರು-ಮುಳ್ಳಪ್ಪ ಎಂಬುವರಿಗೆ ಸೇರಿದ ಹಸುಗಳನ್ನು ನಿನ್ನೆ ಮೇಯಲು ಬಿಟ್ಟಿದ್ದರು. ಆದರೆ ಬಳಿಕ ಹಸುಗಳು ಮನೆಗೆ ಬಂದಿರಲಿಲ್ಲ. ಇಂದು ಕಾಫಿ ತೋಟದಲ್ಲಿ ಹಸುವಿನ ಮೃತದೇಹ ಪತ್ತೆಯಾಗಿದೆ.
ಒಂದು ಹಸು ಹುಲಿಯ ದಾಳಿಯಿಂದಾಗಿ ತೀವ್ರ ನಿರ್ತಾಣಗೊಂಡಿದ್ದು, ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ. ಒಂದೆಡೆ ಆನೆ ದಾಳಿಯಿಂದ ಕಂಗಾಲಾಗಿದ್ದ ಜನರಿಗೆ ಇದೀಗ ಹುಲಿ ದಾಳಿಯ ಭೀತಿ ಎದುರಾಗಿದೆ.
ಹುಲಿಯ ದಾಳಿಗೆ ಬೆಚ್ಚಿಬಿದ್ದಿರುವ ಜನರು, ಕಾರ್ಮಿಕರು ಮನೆಯಿಂದ ಹೊರಬಾರಲು ಹಿಂದೇಟು ಹಾಕುತ್ತಿದ್ದಾರೆ.
ಹುಲಿ ದಾಳಿಯ ಹಿನ್ನೆಲೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಕಠಾರದಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth