6:31 AM Wednesday 28 - January 2026

ಪೆಟ್ರೋಲ್ ಹಾಕಿಸಿ ಪ್ರಧಾನಿ ಮೋದಿಗೆ ಕೈ ಮುಗಿದ ಗ್ರಾಹಕ; ಫೋಟೋ ವೈರಲ್

27/02/2021

ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ವಿವಿಧ ರೀತಿಯ ಬೆಲೆ ಏರಿಕೆಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಸಾರ್ವಜನಿಕರು ಬೆಲೆ ಏರಿಕೆ ವಿರುದ್ಧ ತಮ್ಮದೇ ರೀತಿಯ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಇದೀಗ ಸಾಮಾಜಿಕಜಾಲತಾಣಗಳಲ್ಲಿ ಫೋಟೋವೊಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಪೆಟ್ರೋಲ್ ಬಂಕ್ ಬಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಮುಗಿಯುತ್ತಿರುವಂತಹ ಫೋಟೋಗೆ ಕೈ  ಮುಗಿದು ಪೋಸ್ ನೀಡಿದ್ದಾರೆ.

ಇನ್ನೂ ಈ ಫೋಟೋವನ್ನು ಸಾಕಷ್ಟು ಸಂಖ್ಯೆಯಲ್ಲಿ ಜನರು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ನಾಗರಿಕನೋರ್ವ ಅಚ್ಚೆದಿನ್ ನೀಡಿದ್ದಕ್ಕಾಗಿ ಪ್ರಧಾನಿ ಮೋದಿಗೆ ಧನ್ಯವಾದ ಹೇಳುತ್ತಿದ್ದಾರೆ ಎಂಬ ಶೀರ್ಷಿಕೆ ನೀಡುತ್ತಿದ್ದಾರೆ.

ಇಂಧನ ಬೆಲೆ ಪ್ರತೀ ದಿನ ಏರಿಕೆಯಾಗುತ್ತಿದೆ. ಇದರಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ಸರ್ಕಾರದ ಪರವಾಗಿರುವವರು ಕೂಡ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆಲೆ ಏರಿಕೆಯು ಕೇಂದ್ರ ಸರ್ಕಾರಕ್ಕೆ ದೊಡ್ಡ ಸಂಕಷ್ಟವಾಗಿ ಪರಿಣಮಿಸಿದೆ.

modi

ಇತ್ತೀಚಿನ ಸುದ್ದಿ

Exit mobile version