ವಿಮಾನದಲ್ಲಿ ಕರ್ಜಿಕಾಯಿ ಸೇವಿಸಿದ ಪೈಲೆಟ್ ಗಳನ್ನು ವಜಾಗೊಳಿಸಿದ ಸ್ಪೈಸ್ ಜೆಟ್ ಏರ್ ಲೈನ್ಸ್!
ನವದೆಹಲಿ: ಕರ್ತವ್ಯದ ವೇಳೆ ಕರ್ಜಿಕಾಯಿ ಹಾಗೂ ಪಾನೀಯಗಳನ್ನು ಸೇವಿಸಿದ ಇಬ್ಬರು ಪೈಲೆಟ್ ಗಳ ವಿರುದ್ಧ ಸ್ಪೈಸ್ ಜೆಟ್ ಕಠಿಣ ಕ್ರಮಕೈಗೊಂಡಿದ್ದು, ಪೈಲೆಟ್ ಗಳು ಕರ್ಜಿಕಾಯಿ ಹಾಗೂ ಪಾನೀಯ ಸೇವಿಸಿದ ಫೋಟೋ ಆಧರಿಸಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ವಿಮಾನ ಚಾಲನೆಯ ವೇಳೆ ಪೈಲೆಟ್ ಗಳು ಈ ರೀತಿಯ ವರ್ತನೆ ತೋರಿಸಿರುವುದು ವಿಮಾನ ಸುರಕ್ಷತೆಗೆ ಅಪಾಯಕಾರಿಯಾಗಿದೆ. ಸ್ಪೈಸ್ ಜೆಟ್ ಏರ್ ಲೈನ್ಸ್ ಕಂಪೆನಿಯು ಕಾಕ್ ಪಿಟ್ ನಲ್ಲಿ ಆಹಾರ ಸೇವನೆ ವಿಚಾರದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿವೆ. ಆದರೆ, ಹೋಳಿ ಹಬ್ಬದ ದಿನದಂದು ಈ ಇಬ್ಬರು ಪೈಲೆಟ್ ಗಳು ನಿಯಮಗಳನ್ನು ಗಾಳಿಗೆ ತೂರಿ ಕಾಕ್ ಪಿಟ್ ನಲ್ಲಿ ಆಹಾರ ಸೇವಿಸಿದ್ದರು.
ಮಾಹಿತಿಯ ಪ್ರಕಾರ ಇಬ್ಬರು ಪೈಲೆಟ್ ಗಳನ್ನು ಕೂಡ ಸೇವೆಯಿಂದ ತೆಗೆದು ಹಾಕಲಾಗಿದ್ದು, ಅವರ ವಿಚಾರಣೆ ಇನ್ನಷ್ಟೆ ನಡೆಯಬೇಕಿದೆ. ವಿಚಾರಣೆ ಪೂರ್ಣಗೊಂಡ ಬಳಿಕ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಕಂಪೆನಿ ವಕ್ತಾರರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























