ಮೋದಿ ದ್ವೇಷ ಭಾಷಣ ಮಾಡಿ ಪ್ರಧಾನ ಮಂತ್ರಿ ಹುದ್ದೆಯ ಘನತೆಯನ್ನು ಕುಗ್ಗಿಸಿದ್ದಾರೆ: ಮನಮೋಹನ್‌ ಸಿಂಗ್‌ ಕಿಡಿ

30/05/2024

ಪ್ರಧಾನಿ ನರೇಂದ್ರ ಮೋದಿ “ತಮ್ಮ ದ್ವೇಷದ ಭಾಷಣಗಳ ಮೂಲಕ ಪ್ರಧಾನ ಮಂತ್ರಿ ಹುದ್ದೆಯ ಘನತೆಯನ್ನು ಕುಗ್ಗಿಸಿದ್ದಾರೆ” ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಹೇಳಿದ್ದಾರೆ. ನಾನು ನನ್ನ ಜೀವಮಾನದಲ್ಲಿ ಯಾವುದೇ ಒಂದು ಸಮುದಾಯವನ್ನು ಇನ್ನೊಂದು ಸಮುದಾಯದಿಂದ ಪ್ರತ್ಯೇಕವಾಗಿ ನೋಡಿಲ್ಲ. ಹಾಗೇ ಮಾಡುವುದು ಬಿಜೆಪಿಯ ಏಕೈಕ ಹಕ್ಕುಸ್ವಾಮ್ಯವಾಗಿದೆ ಎಂದು ಸಿಂಗ್‌ ಹೇಳಿದ್ದಾರೆ.

ಮೋದೀ ಜಿ ದ್ವೇಷದ ಭಾಷಗಳಲ್ಲಿ ತೊಡಗಿದ್ದಾರೆ ಹಾಗೂ ಇವುಗಳು ಸಮಾಜವನ್ನು ಒಡೆಯುವ ಸ್ವರೂಪದ ಭಾಷಣಗಳಾಗಿವೆ” ಎಂದು ಪಂಜಾಬ್‌ ಮತದಾರರಿಗೆ ಮಾಡಿರುವ ಮೂರು ಪುಟಗಳ ಅಪೀಲಿನಲ್ಲಿ ಡಾ. ಸಿಂಗ್‌ ಹೇಳಿದ್ದಾರೆ.

ಈ ಹಿಂದಿನ ಯಾವುದೇ ಪ್ರಧಾನಿ ಇಂತಹ ದ್ವೇಷದಿಂದ ಕೂಡಿದ, ಅಸಂಸದೀಯ ಕಟು ಪದಗಳನ್ನು ಸಮಾಜದ ಒಂದು ನಿರ್ದಿಷ್ಟ ವಿಭಾಗ ಅಥವಾ ವಿಪಕ್ಷಗನ್ನು ಗುರಿಯಾಗಿಸಿ ಮಾಡಿಲ್ಲ. ಕಳೆದ 10 ವರ್ಷಗಳಲ್ಲಿ ಪಂಜಾಬ್‌, ಪಂಜಾಬಿಗಳು ಮತ್ತು ಪಂಜಾಬಿತನದ ವಿರುದ್ಧ ಆರೋಪಗಳನ್ನು ಹೊರಿಸುವಲ್ಲಿ ಪ್ರಧಾನಿ ಏನನ್ನೂ ಬಿಟ್ಟಿಲ್ಲ ಎಂದು ಡಾ. ಸಿಂಗ್‌ ಹೇಳಿದ್ದಾರೆ.

“ಬಿಜೆಪಿ ಆಡಳಿತದ ವೇಳೆ ಭಾರತದ ಆರ್ಥಿಕತೆ ಊಹಿಸಲಾಗದಷ್ಟು ಕಷ್ಟ ಅನುಭವಿಸಿದೆ. ಅಮಾನ್ಯೀಕರಣ ವೈಫಲ್ಯ, ದೋಷಪೂರಿತ ಜಿಎಸ್‌ಟಿ ಹಾಗೂ ಕೋವಿಡ್‌ ಸಾಂಕ್ರಾಮಿದಕ ಅಸಮರ್ಪಕ ನಿರ್ವಹಣೆಯು ಸಾಕಷ್ಟು ಕಷ್ಟವುಂಟು ಮಾಡಿದೆ. ಅಭೂತಪೂರ್ವ ನಿರುದ್ಯೋಗ ಸಮಸ್ಯೆ, ಹದ್ದುಬಸ್ತಿನಲ್ಲಿರದ ಹಣದುಬ್ಬರ ಸಮಾಜದಲ್ಲಿ ಅಸಮಾನತೆಯ ಅಂತರವನ್ನು ಇನ್ನಷ್ಟು ಹೆಚ್ಚಾಗಿಸಿದೆ,” ಎಂದು ಮನಮೋಹನ್‌ ಸಿಂಗ್‌ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version