‘ತಾನು ಜೈವಿಕವಾಗಿ ಜನಿಸಿಲ್ಲ’: ‘ದೇವರೇ ನನ್ನನ್ನು ಕಳುಹಿಸಿದ್ದಾನೆ’ ಎಂದು ಹೇಳಿ ತಮಾಷೆಗೊಳಗಾದ ಪ್ರಧಾನಿ ಮೋದಿ

23/05/2024

ತಾನು ಜೈವಿಕವಾಗಿ ಜನಿಸಿಲ್ಲ. ದೇವರೇ ನನ್ನನ್ನು ಕಳುಹಿಸಿದ್ದಾನೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಸಾರ್ವಜನಿಕ ತಮಾಷೆಯ ವಸ್ತುವಾಗಿದ್ದಾರೆ. ನ್ಯೂಸ್ 18 ನ ರೂಬಿ ಕಾ ಲಿಯಾಕತ್ ಜೊತೆ ಸಂದರ್ಶನದಲ್ಲಿ ಮಾತಾಡುತ್ತಾ, ಪ್ರಧಾನಿ ಈ ಹೇಳಿಕೆಯನ್ನು ನೀಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು ನೆಟ್ಟಿಗರು ಇದನ್ನು ಆತ್ಮರತಿ ಎಂದು ಗೇಲಿ ಮಾಡಿಕೊಳ್ಳುತ್ತಿದ್ದಾರೆ.

ನಿಮಗೆ ಸುಸ್ತು ಅನ್ನೋದು ಆಗುವುದಿಲ್ಲವೇ ಎಂದು ರೂಬಿ ಕಾ ಲಿಯಾಕತ್ ಪ್ರಶ್ನಿಸಿದ್ದಾರೆ. ನನ್ನನ್ನು ದೇವರೇ ಕಳುಹಿಸಿದ್ದು ಎಂದು ಪ್ರಧಾನಿ ಅದಕ್ಕೆ ಉತ್ತರ ನೀಡಿದ್ದಾರೆ.
ನನ್ನ ತಾಯಿ ಜೀವಂತವಾಗಿರುವವರೆಗೂ ನಾನು ಜೈವಿಕವಾಗಿ ಜನಿಸಿದ್ದೇನೆ ಎಂದು ನಂಬಿದ್ದೆ, ನನ್ನ ತಾಯಿ ಮರಣ ಹೊಂದಿದ ಬಳಿಕ ನಾನು ನನ್ನ ಎಲ್ಲಾ ಅನುಭವಗಳನ್ನು ಜೊತೆಗೂಡಿಸಿ ನೋಡುತ್ತೇನೆ. ನನ್ನನ್ನು ಪರಮಾತ್ಮನೇ ಕಳುಹಿಸಿದ್ದು ಎಂದು ನನಗೆ ಮನವರಿಕೆಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಈ ಶಕ್ತಿ ನನಗೆ ಜೈವಿಕ ದೇಹದಿಂದ ಸಿಗುವುದಲ್ಲ.
ಈ ಶಕ್ತಿ ನನಗೆ ದೇವರಿಂದ ದಯಪಾಲಿಸಲಾಗಿದೆ. ದೇವರು ನನ್ನ ಕೆಲಸವನ್ನು ನನ್ನ ಮೂಲಕ ಮಾಡಿಸಲು ನನಗೆ ಶಕ್ತಿ ಸಾಮರ್ಥ್ಯ ಉದ್ದೇಶ ಪ್ರೇರಣೆಯನ್ನು ನೀಡಿದ್ದಾನೆ ಎಂದವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version