ರವಿವಾರ ಪ್ರಧಾನಿ ಮೋದಿಗೆ ಬರ್ತ್ ಡೇ ಸಂಭ್ರಮ: ಬಿಜೆಪಿ ಪಕ್ಷದಿಂದ ಫಿಕ್ಸ್ ಆದ ಸರಣಿ ಕಾರ್ಯ ಏನ್ ಗೊತ್ತಾ..?

16/09/2023

ಪ್ರಧಾನಿಗೆ ಹುಟ್ಟುಹಬ್ಬದ ಸಂಭ್ರಮ. ಹೌದು. ಇದೇ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ 73ನೇ ಜನ್ಮದಿನದ ಸಂಭ್ರಮ. ಈ ದಿನವನ್ನು ಸಂಭ್ರಮದಿಂದ ಆಚರಿಸಲು ಸಚಿವಾಲಯವು ವಿಶೇಷ ಕಾರ್ಯಗಳನ್ನು ಆಯೋಜಿಸಿದೆ. ಜೊತೆಗೆ ಬಿಜೆಪಿ ಪಕ್ಷವು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಪ್ರಧಾನಿ ಮೋದಿ ತಮ್ಮ ಜನ್ಮದಿನವನ್ನು ಸೇವಾ ಮತ್ತು ಜನ ಕಲ್ಯಾಣಕ್ಕೆ ಮೀಸಲಿಟ್ಟಿದ್ದಾರೆ. ಹೀಗಾಗಿ ದೇಶಕ್ಕೆ ಸೇವೆ ಸಲ್ಲಿಸಲು ಭಾರತೀಯ ನಾಗರಿಕರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ‘ನಿಮ್ಮ ಸೇವಾ ಭಾವ ವ್ಯಕ್ತಪಡಿಸಿ’ ಎಂಬ ವಿಶೇಷ ಅಭಿಯಾನವನ್ನು ಬಿಜೆಪಿ ಪ್ರಾರಂಭಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ‘ಸೇವೆಯ ಉಡುಗೊರೆ’ ಆಗಿ ತಮ್ಮ ಸೇವಾ ಭಾವವನ್ನು ವ್ಯಕ್ತಪಡಿಸಬಹುದು. ಅದು ನಮೋ ಆ್ಯಪ್ ಮೂಲಕ.

ಈ ಉಡುಗೊರೆ ಭಾರತೀಯರಲ್ಲಿ ಹೆಮ್ಮೆ ಮತ್ತು ಸಾಧನೆಯ ಭಾವವನ್ನು ಹುಟ್ಟುಹಾಕುವುದಲ್ಲದೆ, ರಾಷ್ಟ್ರದ ಸೇವೆಗಾಗಿ ತನ್ನ ಸರ್ವಸ್ವವನ್ನು ಮುಡಿಪಾಗಿಟ್ಟ ನಾಯಕರನ್ನು ಸ್ಮರಿಸಲು ಇದಕ್ಕಿಂತ ಉತ್ತಮವಾದ ದಿನವಿಲ್ಲ ಎಂದು ಅವರು ಹೇಳಿದ್ದಾರೆ.

ನಮೋ ಆಪ್‌ನ ಸಂವಾದಾತ್ಮಕ ಮತ್ತು ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಬಳಸಿಕೊಂಡು ಪ್ರತಿಜ್ಞೆ ಮತ್ತು ಸೇವೆಯನ್ನು ದಾಖಲು ಮಾಡಲಾಗುತ್ತದೆ. ಇದು ಪ್ರಗತಿ ಮತ್ತು ಅಭಿವೃದ್ಧಿಗಾಗಿ ಹೊಸ ಭಾರತದ ಸಂಕಲ್ಪವನ್ನು ಬಲಪಡಿಸುವಲ್ಲಿ ಬಹಳ ದೂರ ಕೊಂಡ್ಯೊಯಲಿದೆ.

ನಿಮ್ಮ ಸೇವಾ ಭಾವ ಅಭಿಯಾನದ ಮೂಲಕ ಸೇವಾ ಚಟುವಟಿಕೆಗಳ ಫೋಟೋಗಳನ್ನು ಅಪ್ ಲೋಡ್ ಮಾಡಬಹುದು. 9 ವಿಭಿನ್ನ ಸೇವಾ ಚಟುವಟಿಕೆಗಳಿವೆ. ಸೇವಾ ಚಟುವಟಿಕೆಗಳನ್ನು ಪೂರ್ಣಗೊಳಿಸಿದ ನಂತರ ಪಡೆದ ಬ್ಯಾಡ್ಜ್ ಗಳನ್ನು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದರೊಂದಿಗೆ ಇತರರನ್ನು ಪ್ರೇರೆಪಿಸಬಹುದಾಗಿದೆ.

ಇತ್ತೀಚಿನ ಸುದ್ದಿ

Exit mobile version