ಪೊಲೀಸರಿಗೆ 5 ಸಾವಿರ ರೂ. ಪ್ರೋತ್ಸಾಹ ಧನ ಘೋಷಿಸಿದ ಎಂ.ಕೆ.ಸ್ಟ್ಯಾಲಿನ್

m k stalin
03/06/2021

ಚೆನ್ನೈ: ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ದುಡಿಯುತ್ತಿರುವ  ಪೊಲೀಸರಿಗೆ ತಮಿಳುನಾಡಿನಲ್ಲಿ ಎಂ.ಕೆ.ಸ್ಟ್ಯಾಲಿನ್ ನೇತೃತ್ವದ ಸರ್ಕಾರ 5 ಸಾವಿರ ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದೆ.

ಕೊರೊನಾ ವೈರಸ್ ನಿಂದ ತೀವ್ರ ತರಹದ ಪ್ರಾಣ ಹಾನಿ ಸಂಭವಿಸಿದರೂ, ದೃತಿಗೆಡದೇ ಪೊಲೀಸರು ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸರಿಗೆ ಪ್ರೋತ್ಸಾಹ ಧನವಾಗಿ ತಮಿಳುನಾಡು ಸರ್ಕಾರ 5 ಸಾವಿರ ರೂಪಾಯಿಗಳನ್ನು  ನೀಡಲು ನಿರ್ಧರಿಸಿದ್ದು, ಈ ಬಗ್ಗೆ ಸ್ಟ್ಯಾಲಿನ್ ಅಧಿಕೃತ ಹೇಳಿಕೆ ನೀಡಿದ್ದಾರೆ.

ಇನ್ನೂ ಸಾರ್ವಜನಿಕರ ರಕ್ಷಣೆಗಾಗಿ ದುಡಿಯುತ್ತಿರುವ ಪೊಲೀಸರ ಆರೋಗ್ಯದ ದೃಷ್ಟಿಯಿಂದ ಬಹುತೇಕ ಪೊಲೀಸರಿಗೆ ಕೊವಿಡ್ ಲಸಿಕೆಯನ್ನೂ ವಿತರಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಜನರಿಗೆ ಭದ್ರತೆ ನೀಡುತ್ತಿರುವ ಪೊಲೀಸರಿಗೆ ಸರ್ಕಾರದ ಭದ್ರತೆ ಕೂಡ ಅಗತ್ಯವಾಗಿದೆ.

ಇನ್ನೂ ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪನವರು ವಿವಿಧ ವರ್ಗದವರಿಗೆ ಪ್ಯಾಕೇಜ್ ಘೋಷಿಸಿದ್ದಾರೆ. ರಾಜ್ಯದಲ್ಲಿ ಕೂಡ ಪೊಲೀಸರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕಾದ ಅಗತ್ಯ ಇದೆ. ತಮ್ಮ ಕುಟುಂಬವನ್ನು ಬಿಟ್ಟು ಸಾರ್ವಜನಿಕರ ರಕ್ಷಣೆಗೆ ಮುಂದಾಗುತ್ತಿರುವ ಪೊಲೀಸರಿಗೆ ಸರ್ಕಾರ ಕೊರೊನಾ ಸಂದರ್ಭದಲ್ಲಿ ಇನ್ನಷ್ಟು ಭದ್ರತೆ ನೀಡಬೇಕಿದೆ ಎನ್ನುವ ಅಭಿಪ್ರಾಯಗಳು ಕೂಡ ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ

Exit mobile version