ಅಮೆರಿಕದಲ್ಲಿ ಇಸ್ರೇಲ್ ನ ವಿರುದ್ಧ ಪ್ರತಿಭಟನೆ: ಪಟ್ಟು ಬಿಡದ ಕೊಲಂಬಿಯಾ ಯೂನಿವರ್ಸಿಟಿಯ ವಿದ್ಯಾರ್ಥಿಗಳು

01/05/2024

ಅಮೆರಿಕದಲ್ಲಿ ಇಸ್ರೇಲ್ ನ ವಿರುದ್ಧ ಪ್ರತಿಭಟನೆಯ ಕೇಂದ್ರವಾಗಿರುವ ಕೊಲಂಬಿಯಾ ಯೂನಿವರ್ಸಿಟಿಯ ವಿದ್ಯಾರ್ಥಿಗಳು ತಮ್ಮ ಪಟ್ಟನ್ನು ಬಿಗಿಗೊಳಿಸಿದ್ದಾರೆ. ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಯೂನಿವರ್ಸಿಟಿ ಮುಂದಾಗಿದ್ದರೂ ವಿದ್ಯಾರ್ಥಿಗಳು ಹೆಜ್ಜೆ ಹಿಂದಿ ಇಟ್ಟಿಲ್ಲ. ಕ್ಯಾಂಪಸ್ ನಲ್ಲಿ ಹಾಕಲಾಗಿರುವ ಪ್ರತಿಭಟನಾ ಟೆಂಟ್ ಳನ್ನು ಕಿತ್ತುಹಾಕುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದರೂ ವಿದ್ಯಾರ್ಥಿಗಳು ಹಿಂದಡಿ ಇಟ್ಟಿಲ್ಲ.

ಪ್ರತಿಭಟನೆಯನ್ನು ನಿಲ್ಲಿಸುವುದಕ್ಕಾಗಿ ಯೂನಿವರ್ಸಿಟಿ ಅಧಿಕಾರಿಗಳು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಕೊಲಂಬಿಯ ಯುನಿವರ್ಸಿಟಿ ಸಸ್ಪೆಂಡ್ ಮಾಡಲು ಪ್ರಾರಂಭಿಸಿದೆ. ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳ ನಡುವೆ ನಡೆದ ದೀರ್ಘ ಮಾತುಕತೆಗಳು ವಿಫಲವಾಗಿವೆ.

ಪ್ರತಿಭಟನೆಗೆ ಸಂಬಂಧಿಸಿದಂತೆ ಏಪ್ರಿಲ್ 18ರಂದು ನೂರರಷ್ಟು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗಾಝಾದ ಜನರಿಗೆ ಬೆಂಬಲವನ್ನು ಸೂಚಿಸಿ ಯುನಿವರ್ಸಿಟಿ ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ಟೆಂಟ್ ಸ್ಥಾಪಿಸಿದ್ದರು. ಗಾಜಾದ ಮಂದಿ ಟೆಂಟುಗಳಲ್ಲಿ ವಾಸಿಸುತ್ತಿದ್ದು ಅದನ್ನು ಜಗತ್ತಿಗೆ ತಿಳಿಸುವ ಉದ್ದೇಶದಿಂದ ನಾವು ಟೆಂಟ್ ಹಾಕಿದ್ದೇವೆ ಎಂದು ವಿದ್ಯಾರ್ಥಿಗಳು ವಾದಿಸಿದ್ದಾರೆ. ಇದೇ ವೇಳೆ ಟೆಂಟ್ಗಳನ್ನು ಕಿತ್ತುಹಾಕಿ ಎಂದು ಅಧಿಕಾರಿಗಳು ವಿದ್ಯಾರ್ಥಿಗಳಲ್ಲಿ ವಿನಂತಿಸಿದ್ದಾರೆ. ಆದರೆ ವಿದ್ಯಾರ್ಥಿಗಳು ಅದಕ್ಕೆ ಒಪ್ಪಿಲ್ಲ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version