500 ಫೈನ್ ಹಾಕ್ಬೇಕೋ, ತಿಳುವಳಿಕೆ ಹೇಳಿದ್ರೆ ಸಾಕೋ: 2 ದಿನದಲ್ಲಿ ಸಾವಿರಾರು ಹೆಲ್ಮೇಟ್ ಸೀಜ್ ಮಾಡಿದ ಪೊಲೀಸರು

helmet
29/06/2023

ಜನ ಅಪಘಾತದಿಂದ ತಪ್ಪಿಸಿಕೊಳ್ಳಲು ಹೆಲ್ಮೆಟ್ ಹಾಕೋದಕ್ಕಿಂತಲೂ ಹೆಚ್ಚಾಗಿ, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೆಲ್ಮೆಟ್ ಧರಿಸುವವರೇ ಹೆಚ್ಚು. ಇಂತಹ ಪ್ರಯಾಣಿಕರಿಗೆ ಚಿಕ್ಕಮಗಳೂರು ನಗರದ ಗಲ್ಲಿ—ಗಲ್ಲಿಗಳಲ್ಲಿ ಪೊಲೀಸರು ಆರೋಗ್ಯ ಪಾಠ ಹೇಳಿದ್ದಾರೆ.

“500 ಫೈನ್ ಹಾಕ್ಬೇಕೋ, ತಿಳುವಳಿಕೆ ಹೇಳಿದ್ರೆ ಸಾಕೋ…, ಇವತ್ ಫೈನ್‌ ಹಾಕಲ್ಲ, ಹಾಗೇ ಬಿಡ್ತೀನಿ…”  ಎಂದು ಬೈಕ್ ಸವಾರರಿಗೆ ಎಚ್ಚರಿಕೆ ನೀಡುತ್ತಾ ಹಾಫ್ ಹೆಲ್ಮೇಟ್ ಸೀಜ್ ಮಾಡಿ ಹೊಸ ಸುರಕ್ಷಿತ ಹೆಲ್ಮೆಟ್ ತೆಗೆದುಕೊಳ್ಳುವಂತೆ ಪೊಲೀಸರು ಸೂಚನೆ ನೀಡಿದ್ರು.

ತಲೆ, ಕಿವಿ, ಮುಖ ಕವರ್ ಆಗುವಂತಹಾ ಹೆಲ್ಮೇಟ್ ಹಾಕಬೇಕು ಎಂದು ಹಾಫ್ ಹೆಲ್ಮೇಟ್ ಬೈಕ್ ಸವಾರರಿಗೆ ಕಾಫಿನಾಡ ಖಾಕಿಗಳು ಆರೋಗ್ಯ ಪಾಠ ಹೇಳಿದ್ರು.

ಚಿಕ್ಕಮಗಳೂರು ನಗರದ ಗಲ್ಲಿ-ಗಲ್ಲಿಗಳಲ್ಲಿ ಹಾಫ್ ಹೆಲ್ಮೇಟ್ ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. 2 ದಿನದಲ್ಲಿ ಸಾವಿರಾರು ಹೆಲ್ಮೇಟ್ ಗಳನ್ನ ಪೊಲೀಸರು ಸೀಜ್  ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version