2:24 PM Wednesday 20 - August 2025

ಇರಾನ್ ಪರ ನಿಲ್ಲುತ್ತಾ ರಷ್ಯಾ—ಚೀನಾ? ಮುಂದೇನಾಗುತ್ತದೆ!

Iran Israe war
22/06/2025

ಅಮೆರಿಕ ಭಾನುವಾರ ಇರಾನ್‌ ನ ಮೂರು ಪರಮಾಣು ತಾಣಗಳ ಮೇಲೆ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಇದೀಗ ಮೂರನೇ ಮಹಾಯುದ್ಧದ ಸಾಧ್ಯತೆ ಇದೆಯೇ ಎನ್ನುವ  ಆತಂಕ ಎದುರಾಗಿದೆ. ಇಸ್ರೆಲ್ ಪರ ನಿಂತು ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದೆ. ಅಮೆರಿಕ ಇಸ್ರೆಲ್ ಮತ್ತು ಇರಾನ್ ಯುದ್ಧದಲ್ಲಿ ಮಿಲಿಟರಿ ಹಸ್ತಕ್ಷೇಪ ಮಾಡಬಾರದು ಎಂದು ರಷ್ಯಾ ಗಂಭೀರ ಎಚ್ಚರಿಕೆಯನ್ನು ನೀಡಿದ್ದರೂ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದೆ. ಇದೇ ಸಂದರ್ಭದಲ್ಲಿ ಮುಂದೇನು ನಡೆಯಬಹುದು ಎನ್ನುವ ಕುತೂಹಲ ಹೆಚ್ಚಿದೆ.

ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದರಿಂದ ಇರಾನ್  ಅಮೆರಿಕದ ವಾಯು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಇರಾನ್ ನ ದೂರದರ್ಶನದಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಇರಾನ್ ಮೇಲೆ ನಡೆಸಿದ ದಾಳಿಯಿಂದಾಗಿ ಅಮೆರಿಕದ ನಾಗರಿಕರು ಮತ್ತು ಮಿಲಿಟರಿ ಇರಾನ್  ಗುರಿಯಾಗಿದ್ದಾರೆ ಎಂದು ದೂರದರ್ಶನ ಹೇಳಿಕೊಂಡಿದೆ.  ಇರಾನ್ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ನ್ಯೂಯಾರ್ಕ್ ಸಿಟಿಯಲ್ಲಿ ಭಾರೀ ಎಚ್ಚರಿಕೆಯ ಕ್ರಮವನ್ನು ಕೈಗೊಳ್ಳಲಾಗಿದೆ. ನ್ಯೂಯಾರ್ಕ್ ನಗರದಲ್ಲಿರುವ  ಪ್ರಮುಖ ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ಸ್ಥಗಳಲ್ಲಿ ಅಮೆರಿಕ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಅಮೆರಿಕದ ಮೇಲೆ ದಾಳಿ ನಡೆಸಲು ಇರಾನ್ ಮುಂದಾದರೆ, ಅದಕ್ಕೂ ಮುನ್ನ ಲೆಬನಾನ್, ಇರಾಕ್ ಮತ್ತು ಸಿರಿಯಾದಿಂದ ಇಸ್ರೇಲ್ ಅನ್ನು ಹೊಡೆಯಲು ಹೆಜ್ಬೊಲ್ಲಾ ಮತ್ತು ಪ್ರಾಕ್ಸಿಗಳ ಸಹಕಾರವನ್ನು ಇರಾನ್ ಕೇಳಬಹುದು. ಹೆಜ್ಬೊಲ್ಲಾ, ಯೆಮೆನ್‌ ನಲ್ಲಿ ಹೌತಿಗಳು, ಇರಾಕ್‌ ನಲ್ಲಿ ಶಿಯಾ ಮಿಲಿಟಿಯಾಗಳು ಮತ್ತು ಗಾಜಾದಲ್ಲಿನ ಹಮಾಸ್ ನ್ನು ಇರಾನ್ ಪ್ರತಿರೋಧಕ್ಕೆ ಬಳಸಬಹುದು. ಈಗಾಗಲೇ ಇಸ್ರೇಲ್ ಮತ್ತು ಅಮೆರಿಕ ವಿರುದ್ಧದ ಹೋರಾಟದಲ್ಲಿ ಇರಾನ್‌ ಗೆ “ಎಲ್ಲಾ ರೀತಿಯ ಬೆಂಬಲ” ನೀಡುವುದಾಗಿ ಹಿಜ್ಬೊಲ್ಲಾ ನಾಯಕ ಶೇಖ್ ನಯೀಮ್ ಖಾಸಿಮ್  ಘೋಷಣೆ ಮಾಡಿದ್ದಾರೆ.

ಇರಾನ್ ಪರ ಚೀನಾ ರಷ್ಯಾ ನಿಲ್ಲುವ ಸಾಧ್ಯತೆ!

ಈಗಾಗಲೇ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿ, ತನ್ನ ಏಕ ಅಧಿಪತ್ಯವನ್ನು ಸ್ಥಾಪನೆ ಮಾಡಲು ಮುಂದಾಗಿದೆ. ಪಾಕಿಸ್ತಾನದ ನೆಲದಲ್ಲಿ ನಿಂತು ಅಮೆರಿಕ ಇರಾನ್, ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳನ್ನು ನಿಯಂತ್ರಿಸುವ ಕನಸು ಕಾಣುತ್ತಿದೆ.  ಇಸ್ರೇಲ್ ಇರಾನ್ ಯುದ್ಧದಲ್ಲಿ ಅಮೆರಿಕದ ಹಸ್ತಕ್ಷೇಪವನ್ನು ರಷ್ಯಾ ಮಾತ್ರವಲ್ಲದೇ ಚೀನಾ ಕೂಡ ಖಂಡಿಸಿತ್ತು. ಟ್ರಂಪ್ ಇಸ್ರೇಲ್ ಮತ್ತು ಇರಾನ್ ಸಂಘರ್ಷಕ್ಕೆ ತೈಲ ಸುರಿಯುತ್ತಿದೆ ಎಂದು ಚೀನಾ ಮಂಗಳವಾರವಷ್ಟೇ ಹೇಳಿಕೆ ನೀಡಿತ್ತು. ಇಸ್ರೇಲ್ ತನ್ನ ಹಗೆತನವನ್ನು ನಿಲ್ಲಿಸಬೇಕು ಎಂದು ಚೀನಾ ಇತ್ತೀಚೆಗಷ್ಟೇ ಕರೆ ನೀಡಿತ್ತು.

ಇನ್ನೂ ಇಸ್ರೇಲ್-ಇರಾನ್ ಯುದ್ಧದಲ್ಲಿ “ಮಿಲಿಟರಿ ಹಸ್ತಕ್ಷೇಪ” ದ ವಿರುದ್ಧ ರಷ್ಯಾ ಅಮೆರಿಕಕ್ಕೆ ಎಚ್ಚರಿಕೆ ನೀಡಿತ್ತು. ಇರಾನ್‌ನ ಬುಶೆಹ್ರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಇಸ್ರೇಲ್ ದಾಳಿಯು “ಚೆರ್ನೋಬಿಲ್ ಶೈಲಿಯ ದುರಂತ”ಕ್ಕೆ ಕಾರಣವಾಗಬಹುದು ಎಂದು ರಷ್ಯಾದ ಪರಮಾಣು ಇಂಧನ ನಿಗಮದ ಮುಖ್ಯಸ್ಥರು ಗುರುವಾರ ಎಚ್ಚರಿಸಿದ್ದಾರೆ. ಈ ಮೂಲಕ ಅಮೆರಿಕದ ಏಕ ಅಧಿಪತ್ಯ ಸ್ಥಾಪನೆಯ ಕನಸನ್ನು ಭಗ್ನಗೊಳಿಸಲು ಚೀನಾ, ರಷ್ಯಾ ಮುಂದಾದರೆ, ಇರಾನ್ ಪರವಾಗಿ ಈ ರಾಷ್ಟ್ರಗಳು ನಿಲ್ಲುವ ಸಾಧ್ಯತೆಗಳಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version