2:11 AM Saturday 24 - January 2026

ಕ್ಷಮೆ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್ ಸಂಬರ್ಗಿ!

prashanth sambargi
05/11/2022

ಬಿಗ್ ಬಾಸ್ ಮನೆಯಲ್ಲಿ ಕನ್ನಡ ಪರ ಹೋರಾಟಗಾರರನ್ನು ನಿಂದಿಸಿರುವ ವಿಚಾರವಾಗಿ ಪ್ರಶಾಂತ್ ಸಂಬರ್ಗಿ ಕ್ಷಮೆ ಕೇಳಿ, ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದ್ದು,  ಕನ್ನಡ ಪರ ಹೋರಾಟಗಾರರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಹೈಡ್ರಾಮಾ ನಡೆದಿದೆ.

ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ದಿನದಿಂದ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ವಿರುದ್ಧ ಪದೇ ಪದೇ ಜಗಳವಾಗುತ್ತಿತ್ತು. ಈ ರೀತಿಯ ಜಗಳದ ಸಂದರ್ಭದಲ್ಲಿ  ರೂಪೇಶ್ ರಾಜಣ್ಣ ಅವರ ಕನ್ನಡ ಪರ ಹೋರಾಟಗಳನ್ನು ನಿಂದಿಸುತ್ತಾ ಬಂದಿರುವ ಪ್ರಶಾಂತ್ ಸಂಬರ್ಗಿ, ಬಿಗ್ ಬಾಸ್ ಮನೆಯಲ್ಲೂ ಇದೇ ಛಾಳಿಯನ್ನು ಮುಂದುವರಿಸಿದ್ದರು.

ಯಾರನ್ನು ಹೇಗೆ ಹತ್ತಿಕ್ಕಬೇಕು, ಮೂಲೆಗುಂಪು ಮಾಡಬೇಕು ಅನ್ನೋದು ನನಗೆ ಗೊತ್ತಿದೆ. ಎಷ್ಟು ಜನರನ್ನು ಮೂಲೆ ಗುಂಪು ಮಾಡಿದ್ದೇನೆ ಎನ್ನುವ ಅರ್ಥದಲ್ಲಿ ಸಂಬರ್ಗಿ ಹೇಳಿಕೆ ನೀಡಿದ್ದು, ಈ ಹೇಳಿಕೆ ವಿರುದ್ಧ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಾಹಿನಿಯ ಮುಂದೆ ಮತ್ತು ಬಿಗ್ ಬಾಸ್ ಶೂಟಿಂಗ್ ನಡೆಯುತ್ತಿರುವ ಸ್ಥಳಕ್ಕೂ ಹೋಗಿ ತೀವ್ರ ಪ್ರತಿಭಟನೆ ನಡೆಸಿದ್ದರು.

ಇದಾದ ಬಳಿಕ ಬಿಗ್ ಬಾಸ್ ಪ್ರಶಾಂತ್ ಸಂಬರ್ಗಿಯನ್ನು ಕನ್ಪೆಷನ್ ರೂಂಗೆ ಕರೆದು, ವಾಸ್ತವ ವಿಚಾರ ತಿಳಿಸಿದಾಗ, ನಾನು ಯಾರಿಗೂ ಅವಮಾನ ಮಾಡಿಲ್ಲ, ಹಾಗೆ ಅನ್ನಿಸಿದ್ದರೆ ಕ್ಷಮಿಸಿ ಎಂದು ಕಣ್ಣೀರಿಟ್ಟು ಕ್ಷಮೆ ಕೇಳಿದ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಲ್ಲದೇ ನನ್ನ ಅಷ್ಟು ಮಾತುಗಳನ್ನೂ ನಾನು ಹಿಂಪಡೆಯುತ್ತೇನೆ ಎಂದು ಹೇಳಿದ್ದಾರೆ.

ಪ್ರಶಾಂತ್ ಸಂಬರ್ಗಿ ಕ್ಷಮೆ ಕೇಳಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಟ್ರೋಲಿಗರಿಗೆ ಆಹಾರವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version