2:48 PM Thursday 11 - December 2025

ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ಮಾಲಿಕ ವಕ್ವಾಡಿ ಪ್ರವೀಣ್ ಶೆಟ್ಟಿ ಅವರಿಗೆ 10 ವರ್ಷಗಳ ಗೋಲ್ಡನ್ ವಿಸಾ 

08/01/2021

ದುಬೈ:  ವಕ್ವಾಡಿ ಪ್ರವೀಣ್ ಶೆಟ್ಟಿ ಅವರ ಮಾಲಕತ್ವದ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ನ 7 ಹೊಟೇಲ್ ಗಳು ದುಬೈಯಲ್ಲಿ ಕಾರ್ಯಾಚರಿಸುತ್ತಿದ್ದು, ಈ ಪೈಕಿ ಇತ್ತೀಚೆಗಷ್ಟೇ ಹೊಸದಾಗಿ ತೆರದಿದ್ದ ಹೊಟೇಲ್ ಗೆ  ಡೈರೆಕ್ಟರ್ ಜರ್ನಲ್ ಆಫ್ ಡಿಟಿಸಿಎಂ ಹೆಲಾಲ್ ಸಯೀದ್ ಅಲ್ ಮರ್ರಿ ಅವರು ಭೇಟಿ ನೀಡಿದ್ದು, ಮಾಲಿಕ ಪ್ರವೀಣ್ ಶೆಟ್ಟಿ ಅವರಿಗೆ ಅಪೂರ್ವವಾದ ಉಡುಗೊರೆ ನೀಡಿದ್ದಾರೆ.

ಕೆಲವೇ ಕೆಲವು ಪ್ರಮುಖ ಜನರಿಗೆ ಮಾತ್ರವೇ  ನೀಡಲಾಗುವ ಯುಎಇಯ ಅಪೂರ್ವವಾದ ಗೋಲ್ಡನ್ ವಿಸಾ ನೀಡಿ ಪ್ರವೀಣ್ ಶೆಟ್ಟಿ ಅವರನ್ನು ಡೈರೆಕ್ಟರ್ ಜರ್ನಲ್ ಆಫ್ ಡಿಟಿಸಿಎಂ ಹೆಲಾಲ್ ಸಯೀದ್ ಅಲ್ ಮರ್ರಿ ಗೌರವಿಸಿದ್ದಾರೆ. ಈ ಗೋಲ್ಡನ್ ವಿಸಾ 10 ವರ್ಷಗಳ ಅವಧಿಯನ್ನು ಹೊಂದಿದೆ.

ಕೊರೊನಾದಂತಹ ಸವಾಲಿನ ನಡುವೆಯೇ ಇಂತಹದ್ದೊಂದು ಭವ್ಯವಾದ ಹೊಟೇಲ್ ನಿರ್ಮಾಣ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಯೀದ್ ಅಲ್ ಮರ್ರಿ, ದುಬೈಯಲ್ಲಿ ಯಾವುದೇ ಸಹಕಾರ ಬೇಕಾದರೂ ಮಾಡುವುದಾಗಿ ತಿಳಿಸಿದ್ದಾರೆ.  ಇದರ ಜೊತೆಗೆ ಗ್ರೂಪ್ ನ ಪ್ರತಿಯೊಬ್ಬರಿಗೂ ಉಚಿತ ಕೊವಿಡ್ ಲಸಿಕೆ ನೀಡಲಾಗುವುದು ಎಂದು ಫಾರ್ಚೂನ್ ಫ್ಲಾಜಾ ಹೊಟೇಲ್ ನ ಮ್ಯಾನೇಜರ್ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version