6:28 AM Wednesday 20 - August 2025

ಪ್ರೀತಿಸಿ ಊರು ಬಿಟ್ಟರು, ಕೈಗಳನ್ನು ಕಟ್ಟಿಕೊಂಡು ನದಿಗೆ ಹಾರಿದರು | ಬೆನ್ನಟ್ಟಿ ಬಂದ ಗಿಡುಗಗಳಿಗೆ ಪ್ರಣಯ ಪಕ್ಷಿಗಳು ಬಲಿ

09/02/2021

ಜೈಪುರ: ಪ್ರೀತಿಸಿ ಊರು ಬಿಟ್ಟ ಜೋಡಿ ಜೊತೆಯಾಗಿ ಬಾಳುವ ಕನಸು ಕಂಡಿದ್ದರು. ಆದರೆ ಕುಟುಂಬಸ್ಥರು ಇದಕ್ಕೆ ಅವಕಾಶ ನೀಡಲೇ ಇಲ್ಲ. ನೆಮ್ಮದಿ ಕಳೆದುಕೊಂಡ ಜೋಡಿ ತಾವು ಬೇರೆಯಾಗಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ತೀರ್ಮಾನಿಸಿದ್ದಾರೆ.

ಈ ಘಟನೆ ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ನಡೆದಿದೆ. ಯುವತಿಯ ತಂದೆ ಯುವಕನನ್ನು ಹೊಲದಲ್ಲಿ  ಕೆಲಸ ಮಾಡಲೆಂದು ಕುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದಕ್ಕೆ ಕರೆತಂದಿದ್ದಾನೆ.

ಇದೇ ಹೊಲದಲ್ಲಿ ಯುವತಿ ಕೂಡ ಕೆಲಸ ಮಾಡುತ್ತಿದ್ದಳು. ಅಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿದೆ. ಪ್ರೀತಿಸಿದ ಇವರಿಬ್ಬರು ಜೊತೆಯಾಗಿ ಬದುಕಬೇಕು ಎನ್ನುವ ಆಸೆಯೊಂದಿಗೆ ಊರು ಬಿಟ್ಟು ಓಡಿ ಬಂದಿದ್ದಾರೆ.

ಊರು ಬಿಟ್ಟು ಬಂದ ಮೇಲೆ  ಕುಟುಂಬಸ್ಥರಿಗೆ ಈ ವಿಚಾರ ತಿಳಿದಿದ್ದು, ಕುಟುಂಬಸ್ಥರು ಇವರನ್ನು ಬೆನ್ನಟ್ಟಿ ಬಂದಿದ್ದಾರೆ. ನಾವು ಇವರ ಕೈಗೆ ಸಿಕ್ಕಿ ಬಿದ್ದರೆ ನಮ್ಮನ್ನು ಬೇರೆ ಮಾಡಿ ಬಿಡುತ್ತಾರೆ ಎಂದು ಹೆದರಿದ ಈ ಜೋಡಿ ಪರಸ್ಪರ ಕೈಗಳನ್ನು ಕಟ್ಟಿಕೊಂಡು ನರ್ಮದಾ ನದಿಗೆ ಹಾರಿದ್ದಾರೆ.

ನೀರಿನ ಕಾಲುವೆ ಬಳಿಯಲ್ಲಿ ಹಲವು ಕೃಷಿಕರು ಕೆಲಸ ಮಾಡುತ್ತಿದ್ದು, ಜೋಡಿ ನೀರಿಗೆ ಬೀಳುತ್ತಿದ್ದಂತೆಯೇ ರಕ್ಷಣೆಗೆ ಯತ್ನಿಸಿದ್ದಾರೆ. ಆದರೆ ಅವರು ಅದಾಗಲೇ ನೀರಿನ ಸೆಳತಕ್ಕೆ ಸಿಲುಕಿ ಬಹಳಷ್ಟು ದೂರ ಕೊಚ್ಚಿ ಹೋಗಿದ್ದಾರೆ.

ಇತ್ತೀಚಿನ ಸುದ್ದಿ

Exit mobile version