ರಾಷ್ಟ್ರಪತಿಯವರಿಂದ ಸ್ವಾತಂತ್ರ್ಯ ಭಾಷಣ: ಸಮಾನತೆ, ಸೌಹಾರ್ದತೆ ಉಸಿರಾಗಲಿ ಎಂದ ದ್ರೌಪದಿ ಮುರ್ಮು

14/08/2023

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಾತಂತ್ರ್ಯೋತ್ಸವ ದಿನಾಚರಣೆಯ ಮುನ್ನಾದಿನವಾದ ಸೋಮವಾರ ವಾಡಿಕೆಯಂತೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿ ದೇಶದ ಜನತೆಗೆ ಶುಭಾಶಯ ತಿಳಿಸಿದರು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ 1947 ಆಗಸ್ಟ್ 15 ರಂದು ಸ್ವಾಂತಂತ್ರ್ಯದ ಹೊಸ ಸೂರ್ಯ ಉದಯಿಸಿತು. ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿಯವರ ತ್ಯಾಗ, ಬಲಿದಾನ ನಾವು ಮರೆಯುವಂತಿಲ್ಲ ಎಂದರು.

ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮಹಾತ್ಮಾ ಗಾಂಧಿ ಪಾತ್ರವನ್ನು ಸ್ಮರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಚಂದ್ರಯಾನ್ -3 ಮೂಲಕ ಭಾರತ ವಿಶ್ವದಲ್ಲೇ ಗುರುತಿಸಿಕೊಂಡಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ದೊಡ್ಡ ದೊಡ್ಡ ಹೊಣೆಗಾರಿಕೆ ನಿಭಾಯಿಸಬಲ್ಲ ಈ ದೇಶದ ಹೆಣ್ಣುಮಕ್ಕಳು ಮುಂದೆ ಸಾಗಬೇಕೆಂದು ನಾನು ಬಯಸುತ್ತೇನೆಂದು ಎಂದರು. ಸಂವಿಧಾನದ ಸಮಾನತೆ ಮತ್ತು ಸೌಹಾರ್ದತೆಗಳನ್ನು ನೆಲೆಗೊಳಿಸುತ್ತೇವೆಂದು ನಾವೆಲ್ಲರೂ ಪ್ರಮಾಣ ಮಾಡೋಣ ಎಂದು ಕರೆ ನೀಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೇಶದಲ್ಲಿ ಬದಲಾವಣೆ ಪ್ರಾರಂಭವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ದೇಶದ ಬುಡಕಟ್ಟು ವಾಸಿಗಳು ತಮ್ಮ ಸಂಪ್ರದಾಯ ಮತ್ತು ಅನನ್ಯತೆಯೊಡನೆ ಆಧುನಿಕತೆಯನ್ನೂ ಸಹ ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಇತ್ತೀಚಿನ ಸುದ್ದಿ

Exit mobile version