10:26 AM Saturday 23 - August 2025

ಗಡ್ಡ ನೋಡಿ ಮುಸ್ಲಿಂ ಅಂದುಕೊಂಡ್ರು: ಪತ್ರಕರ್ತನಿಗೆ ಥಳಿಸಿದ ಬಿಜೆಪಿ ಬೆಂಬಲಿಗರು

13/05/2024

ಗಡ್ಡವನ್ನು ನೋಡಿ ಮುಸ್ಲಿಂ ಆಗಿರಬೇಕೆಂದು ಭಾವಿಸಿ ಪತ್ರಕರ್ತನನ್ನು ಥಳಿಸಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಅಮಿತ್ ಶಾ ಅವರ ರ‍್ಯಾಲಿಯ ವೇಳೆ ನಡೆದಿದೆ. ಪೊಲಿಟಿಕ್ಸ್ ಎಂಬ ಆನ್ಲೈನ್ ಪತ್ರಿಕೆಯ ರಾಘವ್ ತ್ರಿವೇದಿ ಹೀಗೆ ದಾಳಿಗೆ ಒಳಗಾಗಿ ಆಸ್ಪತ್ರೆ ಸೇರಿದವರಾಗಿದ್ದಾರೆ. ಅಮಿತ್ ಶಾ ಅವರ ರ‍್ಯಾಲಿಯ ಬಗ್ಗೆ ವರದಿ ಮಾಡಲು ತೆರಳಿದ್ದ ಇವರನ್ನು ಮುಸ್ಲಿಂ ಎಂದು ಭಾವಿಸಿ ಬಿಜೆಪಿ ಬೆಂಬಲಿಗರು ಥಳಿಸಿದ್ದಾರೆ.

ರಾಯ್ ಬರೆಲಿಯಲ್ಲಿ ಅಮಿತ್ ಶಾ ನಡೆಸಿದ ರ್ಯಾಲಿಯ ಕುರಿತಂತೆ ವರದಿ ಮಾಡುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ. ರ‍್ಯಾಲಿಗೆ ಬಂದ ಮಹಿಳೆಯರ ಅಭಿಪ್ರಾಯವನ್ನು ಇವರು ಸಂಗ್ರಹಿಸುತ್ತಿದ್ದರು. ಈ ರ‍್ಯಾಲಿಯಲ್ಲಿ ಭಾಗವಹಿಸುವುದಕ್ಕೆ ತಮಗೆ ಹಣ ನೀಡಲಾಗಿದೆ ಎಂದು ಮಹಿಳೆಯರು ಇವರಲ್ಲಿ ಹೇಳಿಕೊಂಡಿದ್ದರು. ಪ್ರತಿಯೊಬ್ಬರಿಗೂ ನೂರು ರೂಪಾಯಿಯಂತೆ ಹಣವನ್ನು ನೀಡಲಾಗಿದೆ ಎಂದು ಮಹಿಳೆಯರು ಇವರಲ್ಲಿ ಬಹಿರಂಗಪಡಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಇವರನ್ನು ಸುತ್ತುವರಿದಿದ್ದಲ್ಲದೇ ಇವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕ್ಯಾಮರಾ ಮ್ಯಾನ್ ಅಲ್ಲಿಂದ ತಪ್ಪಿಸಿಕೊಂಡರು ಎಂದು ಕೂಡ ಇವರು ಹೇಳಿದ್ದಾರೆ.

ತಾನು ಕುರ್ತಾ ಮತ್ತು ಪೈಜಾಮಾ‌ ಧರಿಸಿದ್ದು ಗಡ್ಡ ಬಿಟ್ಟಿರುವುದನ್ನು ಕಂಡು ಇವರು ತನ್ನನ್ನು ಮುಸ್ಲಿಂ ಎಂದು ಭಾವಿಸಿ ಹಲ್ಲೆ ನಡೆಸಿದ್ದಾರೆ ಎಂದವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version