11:26 PM Thursday 21 - August 2025

ಪಾದ್ರಿ ವಿರುದ್ದವೇ ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಯುವತಿ

20/06/2023

ಇದು ಗಂಭೀರವಾದ ಆರೋಪ. ಹೌದು. ತಾನು 14 ವರ್ಷದ ಬಾಲಕಿಯಾಗಿದ್ದಾಗ ತನಗೆ ನಿರಂತರ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕ್ರೈಸ್ತ ಪಾದ್ರಿಯ ವಿರುದ್ಧ ಯುವತಿಯೊಬ್ಬರು ಆರೋಪ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ, 2012, (ಫೋಕ್ಸೋ Act) ಅಡಿಯಲ್ಲಿ ಕದಂಬೂರ್ ನ ಮಹಿಳಾ ಪೊಲೀಸರು ಪಾದ್ರಿಯನ್ನು ಬಂಧಿಸಿದ್ದಾರೆ. ಚಿನ್ನಾಕುಲಂ ಪ್ರದೇಶದ ಸಮೀಪದ ಕೀಳಕೋಟ್ಟೈ ಚರ್ಚ್‌ನ ಪಾದ್ರಿ ವಿನೋದ್ ಜೋಶ್ವಾ (40) ವಿರುದ್ಧ ದೂರು ದಾಖಲಾಗಿದ್ದು, ಮೊಬೈಲ್ ಫೋನ್‌ಗಳಲ್ಲಿ ವಿಡಿಯೊ ಕರೆಗಳು ಮತ್ತು ಪಠ್ಯ ಸಂದೇಶಗಳ ಮೂಲಕ ಆತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ತಾನು 14ರ ಹರೆಯದವಳಾಗಿದ್ದಾಗ ಕಳೆದ 5 ವರ್ಷಗಳಿಂದ ಚರ್ಚ್‌ಗೆ ಭೇಟಿ ನೀಡಿದಾಗಲೆಲ್ಲ ಪಾದ್ರಿ ಬೆದರಿಕೆಯೊಡ್ಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ವಿಷಯವನ್ನು ಯಾರಿಗಾದರೂ ಹೇಳಿದರೆ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.ಇದಕ್ಕೆ ಹೆದರಿ ಭಯಭೀತಳಾದ ಯುವತಿ ತನ್ನ ತಂದೆತಾಯಿಗಳಿಗೆ ಕೂಡಾ ಈ ವಿಷಯ ತಿಳಿಸಿರಲಿಲ್ಲ. ಕಳೆದ ವರ್ಷ ಮದುವೆಯಾದ ನಂತರವೂ ಆತ ಕೆಟ್ಟ್ಟ ಉದ್ದೇಶದಿಂದ ಕರೆ ಮಾಡಿ ಸಂದೇಶ ಕಳುಹಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿನೋದ್ ಕಳೆದ 10 ವರ್ಷಗಳಿಂದ ಪಾದ್ರಿಯಾಗಿ ಕೆಲಸ ಮಾಡುತ್ತಿದ್ದು, ಚರ್ಚ್‌ನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಸಹ ನಡೆಸುತ್ತಿದ್ದಾರೆ. ಇದೀಗ ತನಿಖೆ ನಡೆಯುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAwby

ಇತ್ತೀಚಿನ ಸುದ್ದಿ

Exit mobile version