1:24 PM Saturday 25 - October 2025

‘ನಾಳೆ ಬಾ’ ಎಂದು ನಾಮಫಲಕ ಧರಿಸಿ ಸರ್ವೇ ಇಲಾಖೆ ಮುಂದೆ ಅರ್ಜಿದಾರನಿಂದ ಪ್ರತಿಭಟನೆ

mudigere
19/11/2022

ಮೂಡಿಗೆರೆ: ಪಟ್ಟಣದ ತಾಲೂಕು ಕಚೇರಿಯಲ್ಲಿರುವ ಸರ್ವೆ ಇಲಾಖೆ ಅಧಿಕಾರಿಗಳು ತಮ್ಮ ಕೆಲಸ ಮಾಡಿಕೊಡದೇ ಸತಾಯಿಸುತ್ತಿದ್ದ ಹಿನ್ನಲೆಯಲ್ಲಿ ಅರ್ಜಿದಾರ ಶ್ರೇಷ್ಠಿ ಎಂಬುವರು ಶನಿವಾರ ಸರ್ವೇ ಇಲಾಖೆ ಮುಂದೆ ‘ನಾಳೆ ಬಾ’ ಎಂಬ ನಾಮಪಲಕವನ್ನು ತನ್ನ ಶರ್ಟ್‍ನ ಹಿಂದೆ ಮುಂದೆ  ಹಾಕಿಕೊಂಡು ವಿಭಿನ್ನ ರೀತಿಯಲ್ಲಿ ಏಕಾಂಗಿಯಾಗಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ತಿ ವಿಭಾಗ ಪತ್ರಕ್ಕಾಗಿ ತಾನು ಸರ್ವೆ ಅಧಿಕಾರಿಗಳಿಗೆ  16-09-2022ರಂದು ಅರ್ಜಿ ಸಲ್ಲಿಸಿದ್ದೆ. ಲೆವೆನ್-ಇ ಸ್ಕೆಚ್ ಮಾಡಲು 5 ನಿಮಿಷ ಸಾಕು. ಕ್ಯೋ ಕೋಡ್ ಸಂಖ್ಯೆ ಬರಲು ಒಂದು ದಿನ ಸಾಕು. ಈ ಕೆಲಸ ಮಾಡಿಕೊಡಲು ಕಳೆದ 65 ದಿನದಿಂದ ಸತಾಯಿಸುತ್ತಿದ್ದಾರೆ. ಪ್ರತಿದಿನ ತಾಲೂಕು ಕಚೇರಿಗೆ ಅಲೆಯುವುದೇ ಕೆಲಸವಾಗಿಬಿಟ್ಟಿದೆ. ಅಲ್ಲದೇ ಈ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿ ಕಮಿಷನರ್ ಅವರನ್ನೂ ಕೂಡ ಭೇಟಿ ಮಾಡಿ ಬಂದಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತನ್ನ ಅರ್ಜಿ ವಿಲೆ ಬಗ್ಗೆ ಕಚೇರಿಗೆ ಬಂದಾಗ ಅಧಿಕಾರಿಗಳು ಸರಿಯಾದ ಮಾಹಿತಿ ಕೂಡ ನೀಡುತ್ತಿರಲಿಲ್ಲ.  ಹಾಗಾಗಿ ದಿಕ್ಕು ತೋಚದೇ ಪ್ರತಿಭಟಿಸುವಂತಾಗಿದೆ. ಈಗ ಇಲ್ಲಿನ ಸರ್ವೇ ಅಧಿಕಾರಿಗಳು ತನ್ನ ಅರ್ಜಿ ಕೈಗೆತ್ತಿಕೊಂಡು ಸೋಮವಾರ ವಿಲೇ ಮಾಡುವ ಭರವಸೆ ನೀಡಿದ್ದಾರೆ. ಸೋಮವಾರ ಕೂಡ ತನ್ನ ಕೆಲಸ ಆಗದಿದ್ದರೆ ಮತ್ತೆ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version