ಪುಣೆ ಕಾರು ಅಪಘಾತ ಕೇಸ್: ಯಡವಟ್ಟು ಮಾಡಿ ಅರೆಸ್ಟ್ ಆದ ಇಬ್ಬರು ವೈದ್ಯರು

ಹಣದಿಂದ ಏನನ್ನೂ ಮಾಡಬಹುದು, ಯಾರನ್ನೂ ಕೊಂಡುಕೊಳ್ಳಬಹುದು ಅನ್ನುವ ಮಾತಿದೆ. ಪುಣೆಯಲ್ಲಿ ಇಬ್ಬರನ್ನು ಬಲಿ ಪಡೆದ ಪೋರ್ಶೆ ಕಾರನ್ನು ಚಲಾಯಿಸುತ್ತಿದ್ದ ಆರೋಪ ಎದುರಿಸುತ್ತಿರುವ ಅಪ್ರಾಪ್ತ ಬಾಲಕನ ರಕ್ತದ ಮಾದರಿಯನ್ನು ಬದಲಾಯಿಸಿದ ಆರೋಪದ ಮೇಲೆ ಪುಣೆ ಪೊಲೀಸರು ಇಬ್ಬರು ಸರ್ಕಾರಿ ಹಿರಿಯ ವೈದ್ಯರನ್ನು ಬಂಧಿಸಿದ್ದಾರೆ. ಈ ಅಪ್ರಾಪ್ತನ ತಂದೆ ಕೋಟ್ಯಾಧಿಪತಿ ಉದ್ಯಮಿ ಅನ್ನುವುದು ಇಲ್ಲಿ ಗಮನಾರ್ಹ.
ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದ ಮುಖ್ಯಸ್ಥ ಡಾಕ್ಟರ್ ಅಜಯ್ ತವಾರೆ ಮತ್ತು ಡಾಕ್ಟರ್ ಶ್ರೀಹರಿ ಹರ್ನೋಳ್ ಬಂಧಿತ ವೈದ್ಯರಾಗಿದ್ದಾರೆ ಎಂದು ತಿಳಿದುಬಂದಿದೆ. ರಕ್ತದ ಮಾದರಿ ಸಂಗ್ರಹಿಸಲು ವಿಳಂಬವಾಗಿದ್ದನ್ನು ಪೊಲೀಸ್ ಆಯುಕ್ತರು ಒಪ್ಪಿಕೊಂಡಿದ್ದಾರೆ. ರಕ್ತದಲ್ಲಿ ಮಧ್ಯದ ಅಂಶವನ್ನು ಪತ್ತೆಹಚ್ಚಲು ಪಡೆಯಲಾಗಿದ್ದ ಆರೋಪಿ ಅಪ್ರಾಪ್ತ ಬಾಲಕನ ರಕ್ತದ ಮಾದರಿಯನ್ನು ಇಬ್ಬರು ವೈದ್ಯರು ಬದಲಿಸಿದ್ದು ಕಂಡುಬಂದಿತ್ತು. ಪುಣೆ ನಗರ ಪೊಲೀಸರು ಮುಂಜಾಗರೂಕತಾ ಕ್ರಮವಾಗಿ ಬಾಲಕನ ರಕ್ತದ ಮಾದರಿಯನ್ನು ಮೇ 19 ಸಂಜೆ ಮತ್ತೆ ಸಂಗ್ರಹಿಸಿದ್ದರು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಘಟನೆಯ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಬಾಲಕನ ತಂದೆ ಮತ್ತು ಅಜ್ಜನನ್ನು ಬಂಧಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth