6:16 AM Saturday 15 - November 2025

ಶ್ರದ್ಧಾ ಹತ್ಯೆ ಪ್ರಕರಣ: ಅಫ್ತಾಬ್ ನೊಂದಿಗೆ ಫ್ಲ್ಯಾಟ್ ಗೆ ಬಂದಿದ್ದ ವೈದ್ಯೆಯ ಹಿಂದೆ ಬಿದ್ದ ಪೊಲೀಸರು!

afthab
27/11/2022

ಶ್ರದ್ಧಾ ವಾಳ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ತಾಬ್ ಪೂನಾವಾಲನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ನಾನಾ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ಶ್ರದ್ಧಾ ಮೃತದೇಹ ಫ್ರೀಜರ್ ನಲ್ಲಿರುವ ಸಂದರ್ಭದಲ್ಲಿ ಅಫ್ತಾಬ್ ನ  ಫ್ಲ್ಯಾಟ್ ಗೆ ಮತ್ತೋರ್ವಳು ಮಹಿಳೆಯನ್ನು ಕರೆ ತಂದಿದ್ದ. ಇದೀಗ ಆ ಮಹಿಳೆಯ ಜೊತೆಗೆ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ.

ವೃತ್ತಿಯಲ್ಲಿ ವೈದ್ಯೆಯಾಗಿರುವ ಆ ಯುವತಿಯನ್ನು ಅಫ್ತಾಬ್ ಡೇಟಿಂಗ್ ಆ್ಯಪ್ ಮೂಲಕ ಸಂಪರ್ಕಿಸಿದ್ದ. ಬಳಿಕ ತನ್ನ ಫ್ಲ್ಯಾಟ್ ಗೆ ಕರೆತಂದಿದ್ದ. ತನ್ನ ಲಿವ್ ಇನ್ ಸಂಗಾತಿಯನ್ನು ಕೊಂದು ಆಕೆಯ ಮೃತದೇಹವನ್ನು ಫ್ರೀಜರ್ ನಲ್ಲಿಟ್ಟಿದ್ದರೂ ಅದೇ ಫ್ಲ್ಯಾಟ್ ನಲ್ಲಿ ವೈದ್ಯೆಯ ಜೊತೆಗೆ ಅಫ್ತಾಬ್ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ಈ ವಿಚಾರವಾಗಿ ವೈದ್ಯೆಯನ್ನು ಪೊಲೀಸರು ನಿರಂತರವಾಗಿ ಪ್ರಶ್ನಿಸಿದ್ದಾರೆ, ಈ ವೇಳೆ ಆಕೆ, ತನಗೆ ಆತನ ಫ್ಲ್ಯಾಟ್ ನಲ್ಲಿ ಮೃತದೇಹ ಇರುವುದು ತಿಳಿದು ಬಂದಿಲ್ಲ ಎಂದಿದ್ದಾಳೆ ಎನ್ನಲಾಗಿದೆ.

ಶ್ರದ್ಧಾ ವಾಳ್ಕರ್ ಹತ್ಯೆ ಪ್ರಕರಣದಲ್ಲಿ ಬಗೆದಷ್ಟು ಕುತೂಹಲ ಸೃಷ್ಟಿಯಾಗುತ್ತಲೇ ಇದೆ. ಜೊತೆಗೆ ಪೊಲೀಸರಿಗೆ ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರ ಲಭಿಸಿಲ್ಲ. ಜೊತೆಗೆ ಅಫ್ತಾಬ್ ನೀಡಿರುವ ಹೇಳಿಕೆಯ ಬಗ್ಗೆಯೂ ಅವರಿಗೆ ಅನುಮಾನಗಳಿವೆ. ಹೀಗಾಗಿ ಅಫ್ತಾಬ್ ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ.

ದಿಲ್ಲಿ ನ್ಯಾಯಾಲಯವು ಪಾತಕಿ ಅಫ್ತಾಬ್ ನನ್ನು ಮತ್ತೆ 13 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version