11:14 AM Saturday 31 - January 2026

ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್

21/01/2021

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಕಳೆದ 140ದಿನಗಳಿಂದ ಜೈಲಿನಲ್ಲಿದ್ದ ನಟಿ ರಾಗಿಣಿ ದ್ವಿವೇದಿ ಅವರಿಗೆ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಮಂಜೂರಾಗಿದ್ದು,  ಈ ಹಿಂದೆ ರಾಗಿಣಿ ದ್ವಿವೇದಿ ಸಲ್ಲಿಸಿದ್ದ 2 ಅರ್ಜಿಗಳು ವಜಾಗೊಂಡಿದ್ದವು. ಇದೀಗ ಕೊನೆಗೂ ಮೂರನೇ ಅರ್ಜಿ ಫಲ ನೀಡಿದೆ.

ಇಂದು ಜಾಮೀನು ದೊರೆತರೂ ಜೈಲಿನಿಂದ ಅವರು ಇಂದೇ ಬಿಡುಗಡೆಗೊಳ್ಳುವುದು ಅನುಮಾನ. ದೆಹಲಿಯಿಂದ ಕೋರ್ಟ್ ನ ಆದೇಶ ಪ್ರತಿ ಎನ್ ಡಿಪಿಎಸ್ ಕೋರ್ಟ್ ಗೆ ಬರುವವರೆಗೂ ಅವರಿಗೆ ಬಿಡುಗಡೆ ಕಷ್ಟ. ನಾಳೆ ರಾಗಿಣಿ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇನ್ನೂ ರಾಗಿಣಿಗೆ ಜಾಮೀನು ದೊರೆತಿರುವ ಬಗ್ಗೆ ಅವರ ತಾಯಿ ಪ್ರತಿಕ್ರಿಯಿಸಿದ್ದು, ರಾಗಿಣಿಗೆ ಜಾಮೀನು ಸಿಕ್ಕಿದ್ದು ಸಂತಸವಾಗಿದೆ. ಈಗಷ್ಟೆ ಮಾಹಿತಿ ಬಂತು. ಮುಂದಿನ ಕಾನೂನು ಪ್ರಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version