7:32 AM Saturday 31 - January 2026

ಯುವತಿಯ ನಗ್ನ ಚಿತ್ರ ತೋರಿಸಿ ಸ್ನೇಹಿತರಿಂದಲೇ ಬ್ಲ್ಯಾಕ್ ಮೇಲ್

21/01/2021

ಬೆಂಗಳೂರು: ಯುವತಿಯ ಸ್ನೇಹಿತರೇ ಆಕೆಯ ನಗ್ನ ಫೋಟೋ ಇರುವುದಾಗಿ ಬೆದರಿಸಿ ಬ್ಲ್ಯಾಕ್ ಮೇಲ್ ಮಾಡಿ ಚಿನ್ನಾಭರಣ, ಹಣ ದೋಚಿದ ಘಟನೆ ಬೆಳಕಿಗೆ ಬಂದಿದ್ದು,  ಬೆಂಗಳೂರಿನ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಸಂತ್ರಸ್ತ ವಿದ್ಯಾರ್ಥಿನಿಯಾಗಿದ್ದಾಳೆ.

ಈ ಯುವತಿಗೆ ಇಬ್ಬರು ಯುವಕರು ಪರಿಚಯವಾಗಿದ್ದರು. ಪರಿಚಯದ ಬಳಿಕ ಆಕೆಯ ಮನೆಗೆ ಪದೇ ಪದೇ ಭೇಟಿ ನೀಡಿ ಸ್ನೇಹಿತರಾಗಿದ್ದರು. ಆ ಬಳಿಕ ಯಾವುದೋ ಕಾರಣಕ್ಕೆ ಮಾತು ಬಿಟ್ಟು ದೂರವಾಗಿದ್ದು,  ಇದಾದ ಬಳಿಕ 2018ರಲ್ಲಿ  ಓರ್ವ ಸ್ನೇಹಿತ, ನಿನ್ನ ನಗ್ನ ಫೋಟೋ ನನ್ನ ಬಳಿ ಇದೆ. ಹಣ ನೀಡದಿದ್ದರೆ, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಆತ ಬೆದರಿಸಿದ್ದಾನೆ.

ಈತನ ಬೆದರಿಕೆಗೆ ಹೆದರಿದ ಯುವತಿ 219 ಗ್ರಾಂ ಚಿನ್ನಾಭರಣ ಹಾಗೂ 75 ಸಾವಿರ ರೂಪಾಯಿ ಹಣವನ್ನು ಆತನಿಗೆ ನೀಡಿದ್ದಾಳೆ. ಇಷ್ಟಾದರೂ ಸುಮ್ಮನಿರದ ಆತ ತನ್ನ ಇನ್ನೊಬ್ಬ ಸ್ನೇಹಿತನಿಗೆ ಯುವತಿಯನ್ನು ಪರಿಚಯ ಮಾಡಿಸಿಕೊಟ್ಟು, ಆಕೆಯನ್ನು ಭೇಟಿ ಮಾಡಿಸಿದ್ದು, ಆತ ಯುವತಿಯು ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಬಳಿಕ ಆತನೂ ಯುವತಿಯನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಈ ವೇಳೆ ಯುವತಿ ತನ್ನ ಮಾವನ ಪತ್ನಿಯ ಮಾಂಗಲ್ಯ  ಸರವನ್ನು ಆತನಿಗೆ ನೀಡಿದ್ದಾಳೆ.

ಇದಾದ ಬಳಿಕವೂ ಆರೋಪಿಗಳಿ ನಿರಂತರವಾಗಿ ಯುವತಿಗೆ ಟಾರ್ಚರ್ ನೀಡಿದ್ದು, ಇದರಿಂದ ಬೇಸತ್ತ ಯುವತಿ ತನ್ನ ಸ್ನೇಹಿತರಾದ ದೇವಸಂದ್ರ ಮತ್ತು ಬ್ರಿಜ್ ಭೂಷಣ್ ಯಾದವ್ ಮೇಲೆ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ

Exit mobile version