ಉತ್ತರ ಪ್ರದೇಶದ ಯವಜನತೆ ನಶೆಯಲ್ಲಿದ್ದಾರೆ: ರಾಹುಲ್ ಗಾಂಧಿ ಹೇಳಿಕೆ

20/02/2024

ಉತ್ತರ ಪ್ರದೇಶದ ಯವಜನತೆ ನಶೆಯಲ್ಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದರು.

ವಾರಣಾಸಿಯಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ವೇಳೆ ಮಾತನಾಡಿದ ಅವರು, ಕೆಲವು ಯುವಕರು ಕುಡಿದು, ಬೀದಿಗಳಲ್ಲಿ ಮಲಗಿರುವುದನ್ನು ಮತ್ತು ರಾತ್ರಿ ನೃತ್ಯ ಮಾಡುವುದನ್ನು ನಾನು ಗಮನಿಸಿದ್ದೇನೆ. ಯುಪಿ ಯುವಕರ ಭವಿಷ್ಯವು ಅಮಲೇರಿಸಿದೆ ಎಂದು ಹೇಳಿದರು.

ರಾಹುಲ್‌ ಗಾಂಧಿ ಅವರ ಈ ಹೇಳಿಕೆಯು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಉತ್ತರಪ್ರದೇಶದ ಜನರು ಕಾಂಗ್ರೆಸ್‌ ನಾಯಕನ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.
ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಭಾರತ್‌ ಜೋಡೋ ನ್ಯಾಯ್‌ ಯಾತ್ರೆ ಜ.14ರಂದು ಮಣಿಪುರದ ತೌಬಲ್‌ನಿಂದ ಪ್ರಾರಂಭವಾಗಿದೆ. ಮಾರ್ಚ್‌ 20 ರಂದು ಮುಂಬೈನಲ್ಲಿ ಕೊನೆಗೊಳ್ಳಲಿದೆ.

ಕಾಂಗ್ರೆಸ್‌ನ ಭಾರತ್‌ ಜೋಡೋ ನ್ಯಾಯ್‌ ಯಾತ್ರೆ 2024ರ ಲೋಕಸಭೆ ಚುನಾವಣೆಗೆ ಮುನ್ನ 15 ರಾಜ್ಯಗಳ ಮೂಲಕ 6,700ಕಿಮೀ ಕ್ರಮಿಸುವ ಗುರಿಯನ್ನು ಹೊಂದಿದೆ.
“ನಾನು ವಾರಣಾಸಿಗೆ ಭೇಟಿ ನೀಡಿದ್ದೆ. ಇಲ್ಲಿ ಪ್ರಗತಿಯ ಬದಲು, ಯುವಜನತೆಯು ಉತ್ತರ ಪ್ರದೇಶದ ಭವಿಷ್ಯದವರು ಬೀದಿಗಳಲ್ಲಿ ಕುಡಿದು ಮಲಗಿ ಮದ್ಯದ ಹಿಡಿತದಲ್ಲಿ ನೃತ್ಯ ಮಾಡುವ ದೃಶ್ಯವನ್ನು ನಾನು ನೋಡಿದೆ.

ಮತ್ತೊಂದೆಡೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಉದ್ಘಾಟಿಸಲಾಗುತ್ತಿದೆ. ನೀವು ನರೇಂದ್ರ ಮೋದಿ, ಅದಾನಿ, ಅಂಬಾನಿಯನ್ನು ಇಲ್ಲಿ ಕಾಣಬಹುದು. ಆದರೆ ಹಿಂದುಳಿದ ವರ್ಗಗಳು, ಆದಿವಾಸಿಗಳು ಅಥವಾ ದಲಿತರ ಜನರನ್ನು ನೀವು ಕಾಣಲು ಸಾಧ್ಯವಿಲ್ಲ ” ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

Exit mobile version