ದಲಿತರು– ಮುಸ್ಲಿಮರ ದಯಾನೀಯ ಸ್ಥಿತಿ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ‘ಕಹಿ ಸತ್ಯ’: ಬಿಎಸ್ ಪಿ ವರಿಷ್ಠೆ ಮಾಯಾವತಿ

ಲಕ್ನೋ: ದೇಶದಲ್ಲಿ ದಲಿತರು ಹಾಗೂ ಮುಸ್ಲಿಮರ ದಯಾನೀಯ ಸ್ಥಿತಿಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ‘ಕಹಿ ಸತ್ಯ’ ಎಂದು ಬಿಎಸ್ ಪಿ ವರಿಷ್ಠೆ ಮಾಯಾವತಿ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಯುಎಸ್ ಪ್ರವಾಸದ ಸಂದರ್ಭದಲ್ಲಿ ಕೋಟ್ಯಂತರ ದಲಿತರು ಮತ್ತು ಮುಸ್ಲಿಮರ ಶೋಚನೀಯ ಸ್ಥಿತಿ ಮತ್ತು ಮತ್ತು ಭಾರತದಲ್ಲಿ ಅವರ ಜೀವನ ಮತ್ತು ಧರ್ಮದ ಅಭದ್ರತೆ ಬಗ್ಗೆ ಹೇಳಿರುವುಗು ಕಹಿ ಸತ್ಯ ಎಂದಿದ್ದಾರೆ.
ದಲಿತರು ಮತ್ತು ಮುಸ್ಲಿಮರ ಈ ಸ್ಥಿತಿಗೆ ಕೇಂದ್ರದ ಕಾಂಗ್ರೆಸ್, ಬಿಜೆಪಿ ಮತ್ತು ಇತರ ಪಕ್ಷಗಳ ಸರ್ಕಾರಗಳು ಸಂಪೂರ್ಣ ಹೊಣೆಗಾರರಾಗಿದ್ದಾರೆ. ಯುಪಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರ ಏನೇ ಇರಲಿ, ಬಹುಸಂಖ್ಯಾತ ವರ್ಗದವರಿಂದ ಬಡವರು ಮತ್ತು ವಂಚಿತರು ಅನ್ಯಾಯ, ದೌರ್ಜನ್ಯಗಳು ಮತ್ತು ಶೋಷಣೆ ಸಾಮಾನ್ಯ ಸಂಗತಿಯಾಗಿದೆ ಎಂದು ಮಾಯಾವತಿ ಹೇಳಿದರು.
ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಸರ್ಕಾರವು ಕಾನೂನಿನ ಆಳ್ವಿಕೆಯನ್ನು ಸ್ಥಾಪಿಸಿತು ಮತ್ತು ಎಲ್ಲರಿಗೂ ನ್ಯಾಯವನ್ನು ಒದಗಿಸಿತ್ತು ಎಂದು ಮಾಯಾವತಿ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw