11:45 PM Wednesday 9 - September 2026

ಪ್ರೀತಿಗೆ ಪೋಷಕರ ವಿರೋಧ: ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ

premi
01/03/2022

ಬೆಂಗಳೂರು: ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಆನೇಕಲ್​ನ ಸಂಮದೂರು ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮಣಿ ಹಾಗೂ ಆತನ ಪ್ರೇಯಸಿ ಅನುಷಾ ಮೃತ ಪ್ರೇಮಿಗಳು. ಮಾರನಾಯಕನಹಳ್ಳಿಯ ಮಣಿ ಹಾಗೂ ಕೊತ್ತಗೊಂಡಪಲ್ಲಿಯ ಅನುಷಾ ಕೆಲವು ಸಮಯದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಈ ವಿಚಾರ ಎರಡು ಕುಟುಂಬಗಳಿಗೆ ತಿಳಿದಿದ್ದು, ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಮನನೊಂದ ಪ್ರೇಮಿಗಳು ನಿನ್ನೆ ಆನೇಕಲ್​ನ ಸಂಮದೂರು ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ಸಂಬಂಧ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆ: ವಿದೇಶಿ ಪ್ರಜೆ ಸೆರೆ​​

ಫುಡ್ ಡೆಲಿವರಿ ಬಾಯ್ ಅಪಹರಣ: 6 ಮಂದಿ ಆರೋಪಿಗಳ ಬಂಧನ

ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪೊಲೀಸರು ವಶಕ್ಕೆ

ಕಚ್ಚಾ ಬದಾಮ್ ಸಿಂಗರ್ ಭುಬನ್ ಬದ್ಯಾಕರ್ ಅಪಘಾತ

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version