3:35 PM Wednesday 22 - October 2025

9 ಶಿಶುಗಳ ಸಾಮೂಹಿಕ ಸಾವು: 1ರಿಂದ 4 ದಿನಗಳ ಶಿಶುಗಳ ಅನುಮಾನಾಸ್ಪದ ಸಾವು

11/12/2020

ಜೈಪುರ: ಕಳೆದೆರಡು ದಿನಗಳಲ್ಲಿ ರಾಜಸ್ಥಾನದಲ್ಲಿ ಶಿಶುಗಳ ಸಾಮೂಹಿಕ ಸಾವು ಸಂಭವಿಸಿದ್ದು,  ಒಟ್ಟು 9 ಶಿಶುಗಳೂ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದೆ.

ಬುಧವಾರ ರಾತ್ರಿ 5 ಶಿಶುಗಳು ಸಾವನ್ನಪ್ಪಿದ್ದರೆ, ಗುರುವಾರ 4 ಶಿಶುಗಳು ಸಾವನ್ನಪ್ಪಿವೆ. ಸಾವನ್ನಪ್ಪಿರುವ ಶಿಶುಗಳೆಲ್ಲವೂ 1ರಿಂದ ನಾಲ್ಕು ದಿನಗಳ ಶಿಶುಗಳು ಎಂದು ವರದಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಅಧೀಕ್ಷಕ ಸುರೇಶ್ ದುಲಾರಾ, ಹಠಾತ್ ಸೋಂಕು ಶಿಶುಗಳ ಸಾವಿಗೆ ಕಾರಣವಾಗಿರಬಹುದು ಎಂದು ಹೇಳಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿಯ ವೈದ್ಯಕೀಯ ನಿರ್ಲಕ್ಷ್ಯದಿಂದ ಶಿಶುಗಳು ಸಾವನ್ನಪ್ಪಿದೆ ಎಂದು ಸಂತ್ರಸ್ತ ಕುಟುಂಬದ ಸದಸ್ಯರು ಆರೋಪಿಸಿದ್ದು, ಗುರುವಾರ ಆಸ್ಪತ್ರೆ ಆವರಣದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version