ರಾಜಸ್ಥಾನದ ‘ಹಸ್ತ’ ಪಾಳಯದಲ್ಲಿ ಅಸಮಾಧಾನದ ಹೊಗೆ: ವಿಧಾನಸಭೆಗೆ ಬಂದ ಮಾಜಿ ಸಚಿವರಿಗೆ ಕೈ ನಾಯಕರಿಂದ ಘೇರಾವ್..!
ಮಹಿಳೆಯರ ಸುರಕ್ಷತೆಯ ಬಗ್ಗೆ ತಮ್ಮದೇ ಪಕ್ಷದ ಸರ್ಕಾರವನ್ನು ಟೀಕಿಸಿದ್ದ ರಾಜಸ್ಥಾನದ ಮಾಜಿ ಸಚಿವ ರಾಜೇಂದ್ರ ಸಿಂಗ್ ಗೂಢಾ ಅವರನ್ನು ರಾಜ್ಯ ವಿಧಾನಸಭೆ ಪ್ರವೇಶಿಸದಂತೆ ಕಾಂಗ್ರೆಸ್ ನಾಯಕರು ತಡೆದ ಘಟನೆ ನಡೆದಿದೆ.
ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಗಂಭೀರ ಆರೋಪ ಮಾಡಿದ ಅವರು, ಕಾಂಗ್ರೆಸ್ ನಾಯಕರು ನನ್ನನ್ನು ಒದ್ದು, ಸಭೆಯಿಂದ ಹೊರಗೆ ಎಳೆದು ಹಾಕಿದ್ದಾರೆ ಎಂದು ಹೇಳಿದ್ದಾರೆ.
ಸಿಎಂ ವಿರುದ್ಧ ಹರಿಹಾಯ್ದ ಅವರು, ವಿಧಾನಸಭೆ ಮತ್ತು ಕ್ರಿಕೆಟ್ ಚುನಾವಣೆಗಳಲ್ಲಿ ಗೆಹ್ಲೋಟ್ ಮಾಡಿದ ಭ್ರಷ್ಟಾಚಾರವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.
‘ಸುಮಾರು 50 ಜನರು ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ಮೇಲೆ ಗುದ್ದಿದರು. ನನ್ನನ್ನು ಒದ್ದು ಕಾಂಗ್ರೆಸ್ ನಾಯಕರು ನನ್ನನ್ನು ವಿಧಾನಸಭೆಯಿಂದ ಹೊರಗೆ ಎಳೆದರು. ರಾಜಸ್ಥಾನ ವಿಧಾನಸಭೆಯ ಅಧ್ಯಕ್ಷರು ನನಗೆ ಮಾತನಾಡಲು ಸಹ ಅವಕಾಶ ನೀಡಲಿಲ್ಲ. ನಾನು ಬಿಜೆಪಿಯೊಂದಿಗೆ ಇದ್ದೇನೆ ಎಂದು ನನ್ನ ವಿರುದ್ಧ ಆರೋಪಗಳಿವೆ. ನನ್ನ ತಪ್ಪೇನು ಎಂದು ತಿಳಿದುಕೊಳ್ಳಲು ನಾನು ಬಯಸುತ್ತೇನೆ’ ಎಂದು ಅವರು ಆರೋಪಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw
























