ಮಕ್ಕಳ ಕೈಯ್ಯಲ್ಲಿದ್ದ ರಕ್ಷಾ ಬಂಧನ ಕಿತ್ತೆಸೆದ ಆರೋಪ:  ಶಾಲೆಗೆ ಮುತ್ತಿಗೆ ಹಾಕಿದ ಪೋಷಕರು

raksha bandhana
12/08/2022

ಮಕ್ಕಳ ಕೈಯ್ಯಲ್ಲಿದ್ದ ರಕ್ಷಾ ಬಂಧನದ ರಾಖಿ ಕಿತ್ತೆಸೆದ ಆರೋಪ ಮಂಗಳೂರಲ್ಲಿ ಕೇಳಿ ಬಂದಿದ್ದು, ಕೊನೆಗೆ ಆ ವಿಚಾರ ಸುಖಾಂತ್ಯಗೊಂಡ ಘಟನೆ ನಡೆದಿದೆ.

ಮಂಗಳೂರು ಹೊರವಲಯದ ಕಾಟಿಪಳ್ಳದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಿನ್ನೆ ‌ಮಕ್ಕಳು ರಕ್ಷಾಬಂಧನ ಹಿನ್ನೆಲೆಯಲ್ಲಿ ಕೈಗೆ ರಾಖಿ ಕಟ್ಟಿಕೊಂಡು ಬಂದಿದ್ದರು. ಇದೇ ವೇಳೆ ಕೆಲ ಶಿಕ್ಷಕರು ರಾಖಿ ತೆಗೆಸಿ ಕಸದ ಬುಟ್ಟಿಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿತ್ತು.

ಹೀಗಾಗಿ  ಪೋಷಕರು‌ ಮತ್ತು ಬಿಜೆಪಿ ಕಾರ್ಯಕರ್ತರು, ಬಿಜೆಪಿ ಯುವಮೋರ್ಛಾ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದರು.

ವಿಡಿಯೋ:

YouTube video player

ಪೋಷಕರು ‌ಮತ್ತು ಶಿಕ್ಷಕರ ವಾಗ್ವಾದದ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರು ಶಾಲೆಯ ಹೋಗಿ ವಿಚಾರಣೆ ನಡೆಸಿದರು. ಇದೇ ವೇಳೆ ಶಿಕ್ಷಕರು ಫ್ರೆಂಡ್ ಶಿಪ್ ಬ್ಯಾಂಡ್ ಅಂದುಕೊಂಡು ತೆಗೆಸಿದ್ದೆವು ಎಂದು ಸಮಜಾಯಿಷಿ ನೀಡಿ ರಕ್ಷಾ ಬಂಧನ ಯಾವುದೇ ಕಾರಣಕ್ಕೂ ತೆಗೆಸಲ್ಲ ಅಂತ ವಿಷಾದ ವ್ಯಕ್ತಪಡಿಸಿದರು.  ಇದೇ ವೇಳೆ ಶಿಕ್ಷಕರೇ ಮತ್ತೆ ಮಕ್ಕಳ ಕೈಗೆ ರಕ್ಷೆ ಕಟ್ಟುವಂತೆ ಪೋಷಕರು ಪಟ್ಟು ಹಿಡಿದ್ರು.

ಈ  ಆರೋಪಕ್ಕೆ ಸಂಬಂಧಿಸಿದಂತೆ  ಕಾಟಿಪಳ್ಳದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಸಂತೋಷ್ ಲೋಬೋ ಪ್ರತಿಕ್ರಿಯೆ ನೀಡಿದ್ದು, ಕೆಲವರು ತಿಳಿಯದೇ ಬೇಜವಾಬ್ದಾರಿಯಿಂದ ವರ್ತಿಸಿ ವಿವಾದ ಸೃಷ್ಟಿಸಿದ್ದಾರೆ. ಈ ಬಗ್ಗೆ ಪೋಷಕರು ‌ಮತ್ತು ಶಿಕ್ಷಕರ ಜೊತೆ ಸಭೆ ಮಾಡಿದ್ದೇವೆ. ಈ ವೇಳೆ ತಪ್ಪು ಮಾಡಿದವರು ಪಶ್ಚಾತ್ತಾಪ ಪಟ್ಟು ಕ್ಷಮೆ ಕೇಳಿದ್ದಾರೆ. ಈಗ ಸಮಸ್ಯೆ ಪರಿಹಾರವಾಗಿ ಸುಖಾಂತ್ಯ ಕಂಡಿದೆ. ಈ ಬಗ್ಗೆ ಅನಾವಶ್ಯಕವಾಗಿ ಯಾರೂ ಮಾತನಾಡದೇ ಸುಖಾಂತ್ಯಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.

ವಿಡಿಯೋ:

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version