5:43 AM Wednesday 20 - August 2025

ರಾಷ್ಟ್ರಧ್ವಜಕ್ಕೆ ಅಗೌರವ ಉಂಟಾಗದಂತೆ ನೋಡಿಕೊಳ್ಳಿ

indian flag
12/08/2022

ಉಡುಪಿ: ಹರ್ಘರ್‌ ತಿರಂಗಾ ಕಾರ್ಯಕ್ರಮವು ಕೇಂದ್ರ ಸರ್ಕಾರದ ರಾಷ್ಟ್ರಾಭಿಮಾನ ಬಿಂಬಿಸುವ ವಿಶೇಷಕಾರ್ಯಕ್ರಮವಾಗಿದ್ದು, ಆಗಸ್ಟ್ 13 ರಿಂದ 15 ರವರೆಗೆಎಲ್ಲಾ ಸರ್ಕಾರಿ ಕಚೇರಿಗಳು ಸೇರಿದಂತೆ ಮನೆ ಮನೆ ಮೇಲೆ ತ್ರಿವರ್ಣಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಾಭಿಮಾನವನ್ನು ಮೆರೆಯಲು ಹಾಗೂ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಕೋರಿದೆ.

ಸಾರ್ವಜನಿಕರು ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನುಆಗಸ್ಟ್ 13ರ ಬೆಳಗ್ಗೆ ಧ್ವಜಾರೋಹಣ ನಡೆಸಿ, ಆ.15 ರ ಸಂಜೆ ಧ್ವಜಅವರೋಹಣ ಮಾಡಿ, ನಂತರ ಧ್ವಜವನ್ನು ಸುರಕ್ಷಿತವಾಗಿತಮ್ಮ ಮನೆಗಳಲ್ಲಿಯೇ ಗೌರವಪೂರ್ವಕವಾಗಿ ಇಟ್ಟುಕೊಳ್ಳಬೇಕು.

ಎಲ್ಲಾ ಸರ್ಕಾರಿ ಕಚೇರಿ, ಶಾಲಾ – ಕಾಲೇಜುಗಳ ಧ್ವಜ ಸ್ಥಂಬಗಳಲ್ಲಿ ಆಗಸ್ಟ್ 13 ರಿಂದ 15ರ ವರೆಗೆಪ್ರತಿದಿನ ಬೆಳಗ್ಗೆ 8 ಗಂಟೆಗೆಧ್ವಜಾರೋಹಣ ಮಾಡಿಸಂಜೆ 6 ಗಂಟೆಗೆಧ್ವಜಾವರೋಹಣ ಮಾಡಬೇಕು. ಧ್ವಜಾರೋಹಣ ಸಮಯದಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version