12:06 PM Tuesday 27 - January 2026

ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ | ರಾತ್ರಿ 10 ಗಂಟೆಯಿಂದ ಜನ ಹೊರ ಬರುವಂತಿಲ್ಲ

23/12/2020

ಬೆಂಗಳೂರು: ರೂಪಾಂತರಗೊಂಡ ಕೊರೊನಾ ವೈರಸ್ ಭಾರತಕ್ಕೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ತಿಳಿಸಿದ್ದಾರೆ.

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ಇರಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದು, ಇಂದಿನಿಂದ ರಾತ್ರಿ 9 ಗಂಟೆಯ ಬಳಿಕ ಬಸ್ ಗಳು ಇರುವುದಿಲ್ಲ ಎಂದು ಅವರು ಹೇಳಿದ್ದು, ಅಗತ್ಯವಸ್ತುಗಳ ಸರಬರಾಜು ವಾಹನಗಳಿಗೆ ಮಾತ್ರವೇ ಅವಕಾಶ ಸಿಗಲಿದೆ ಎಂಧು ಅವರು ಹೇಳಿದ್ದಾರೆ.

ಇಂದು ಸಂಜೆ 5 ಗಂಟೆಯೊಳಗೆ ಸರ್ಕಾರವು ನೈಟ್ ಕರ್ಫ್ಯೂ ಸಂಬಂಧಿತ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಲಿದೆ.  ಜನವರಿ 2ರವರೆಗೆ ರಾತ್ರಿ ಕರ್ಫ್ಯೂ ಇರುವುದರಿಂದ ಮಧ್ಯರಾತ್ರಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರವು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾತ್ರಿ ಮಾತ್ರವೇ ಕರ್ಫ್ಯೂ ವಿಧಿಸಿದೆ. ಹಳೆಯ  ಕೊರೊನಾ ವೈರಸ್ ಅಥವಾ ಹೊಸ ಕೊರೊನಾ ವೈರಸ್ ರಾತ್ರಿ ಮಾತ್ರವೇ ಹರಡುತ್ತಿದೆಯೇ? ಬೆಳಗ್ಗೆ ಹರಡುವುದಿಲ್ಲವೇ? ಇಂತಹದ್ದೊಂದು ನಿಯಮದ ವಾಸ್ತವತೆ ಏನು ಎಂದು ಜನರು ಗೊಂದಲದಲ್ಲಿದ್ದಾರೆ.

ಇತ್ತೀಚಿನ ಸುದ್ದಿ

Exit mobile version