ರಾವಣ ಪ್ರತಿಕೃತಿ ದಹನದ ವೇಳೆ ತಿರುಗಿ ಬಿದ್ದ ರಾವಣ: ದಿಕ್ಕಾಪಾಲಾಗಿ ಓಡಿದ ಜನ!

ಹರ್ಯಾಣ: ರಾವಣನ ಪ್ರತಿಕೃತಿ ದಹಿಸುತ್ತಿದ್ದ ವೇಳೆ ಪ್ರತಿಕೃತಿ ಜನರ ಮೇಲೆ ಬಿದ್ದು ಹಲವರು ಗಾಯಗೊಂಡ ಘಟನೆ ನಡೆದಿದ್ದು, ಈ ವೇಳೆ ಜನರು ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.
ಹರ್ಯಾಣದ ಯಮುನಾನಗರದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದ್ದು, ರಾಮಾಯಣದ ಕಥೆ ಆಧಾರಿತ ನಂಬಿಕೆಯಾದ, ಶ್ರೀರಾಮ ವಿಜಯದ ಸಂಕೇತವಾಗಿ, ರಾವಣ ದಹನ ಕಾರ್ಯಕ್ರಮ ಆಚರಿಸಲಾಗಿತ್ತು.
ರಾವಣ ಪ್ರತಿಕೃತಿ ದಹನ ಅನ್ನೋ ದ್ವೇಷದ ಪರಂಪರೆ ಉತ್ತರ ಭಾರತದಲ್ಲಿ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ಕಳೆದ ಹಲವು ವರ್ಷಗಳಿಂದ ರಾವಣ ಪ್ರತಿಕೃತಿ ದಹನದ ವೇಳೆ ಈ ರೀತಿಯ ಅವಘಡಗಳು ಸಂಭವಿಸುತ್ತಲೇ ಇವೆ.
ಸತ್ಯವಂತ, ನ್ಯಾಯವಂತ, ಸತ್ಚಾರಿತ್ರ್ಯನೂ ಆಗಿರುವ ಬೌದ್ಧ ಮಹಾರಾಜ ರಾವಣನನ್ನು ಶ್ರೀಲಂಕಾದಲ್ಲಿ ದೇವರಾಗಿ ಪೂಜಿಸುತ್ತಾರೆ. ಮತ್ತು ಅಲ್ಲಿ ರಾವಣನ ಕಥೆಯಲ್ಲಿ ರಾಮ ಮತ್ತು ರಾಮಾಯಣದ ಯಾವುದೇ ಉಲ್ಲೇಖಗಳು ಇಲ್ಲ ಎನ್ನುವ ವಾದ ಅಲ್ಲಿದೆ. ರಾಮಾಯಣ ಅನ್ನೋ ಒಂದು ಯುದ್ಧವೇ ನಡೆದಿಲ್ಲ, ಅದು ಕಟ್ಟುಕಥೆ ಅಂತ ಶ್ರೀಲಂಕಾದ ಇತಿಹಾಸಕಾರರು ಹೇಳುತ್ತಾರೆ.
ಆದರೆ ಭಾರತದಲ್ಲಿ ಇದಕ್ಕೆ ತದ್ವಿರುದ್ಧವಾದ ನಂಬಿಕೆಗಳಿವೆ. ಕಳೆದ ಹಲವು ಸಮಯಗಳಿಂದ ರಾವಣನ ಪ್ರತಿಕೃತಿ ದಹನದ ವೇಳೆ ಅವಘಡಗಳು ಸಂಭವಿಸುತ್ತಲೇ ಇವೆ. ರಾವಣ ತಿರುಗಿಬೀಳುತ್ತಿದ್ದಾನೆಯೇ? ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ.
ಇದೀಗ ಹರ್ಯಾಣದಲ್ಲಿ ನಡೆದ ಘಟನೆಯ ವೇಳೆ ಜನರು ಬೆಂಕಿಗೆ ಹೆದರಿ ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯ ಕಂಡು ಬಂದಿದೆ. ಪ್ರತಿಕೃತ ದಹನದ ವೇಳೆ ಸಮೀಪಕ್ಕೆ ತೆರಳಿದವರ ಮೇಲೆಯೇ ಪ್ರತಿಕೃತಿ ಬಿದ್ದಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka