12:22 PM Saturday 23 - August 2025

ಬೆಂವಿವಿ ವತಿಯಿಂದ “ಸಂವಿಧಾನ ಪೀಠಿಕೆ ಓದುವ” ಕಾರ್ಯಕ್ರಮ ಆಯೋಜನೆ: ಕುಲಸಚಿವ ಶೇಕ್ ಲತೀಫ್

constitution
14/09/2023

ಬೆಂಗಳೂರು:  ಪ್ರಥಮವಾಗಿ ಕರ್ನಾಟಕ ರಾಜ್ಯ ಘನ ಸರ್ಕಾರವು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಕರ್ನಾಟಕ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ “ಸಂವಿಧಾನ ಪೀಠಿಕೆ ಓದು” ಕಾರ್ಯಕ್ರಮವನ್ನು ಸಾರ್ವತ್ರೀಕರಿಸಿರುವುದರಿಂದ  ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ಜ್ಞಾನಭಾರತಿ ಆವರಣದ ಆಡಳಿತ ಕಛೇರಿ ಮುಂಭಾಗದಲ್ಲಿ ಸೆಪ್ಟೆಂಬರ್ 15, ಬೆಳಗ್ಗೆ 11:30ಕ್ಕೆ ಆಯೋಜಿಸಿದೆ‌.

ಪೂರಕವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳು, ಕುಲಸಚಿವರು (ಆಡಳಿತ), ಕುಲಸಚಿವರು (ಮೌಲ್ಯಮಾಪನ) ಹಣಕಾಸು ಅಧಿಕಾರಿ, ಎಲ್ಲಾ ವಿಭಾಗಗಳ ಮುಖ್ಯಸ್ಥರು / ನಿರ್ದೇಶಕರು, ಸಮನ್ವಯಾಧಿಕಾರಿಗಳು/ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವರ್ಗದವರು, ಸಂಶೋಧನಾ ಮತ್ತು  ಸ್ನಾತಕೋತ್ತರ ವಿದ್ಯಾರ್ಥಿಗಳು, ಮತ್ತಿತರರು ಭಾಗವಹಿಸಬೇಕೆಂದು ವಿವಿಯ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version