ಧರ್ಮ ಒಂದೇ ಅದುವೆ ವಿಶ್ವ ಮಾನವ ಧರ್ಮ: ಡಾ.ಸುರೇಶ ನೆಗಳಗುಳಿ
ಪಡುಬಿದ್ರಿ: ಕುವೆಂಪು ಜನ್ಮ ದಿನದ ನೆನಪಿನಲ್ಲಿ ‘ಓ ನನ್ನ ಚೇತನಾ’ ವಿಚಾರಗೋಷ್ಠಿ, ಕವಿಗೋಷ್ಠಿಯು ಜನವರಿ 4ರಂದು ಪಡುಬಿದ್ರಿಯ ಸುಜ್ಲಾನ್ ಕಾಲೋನಿಯ ಸಭಾಭವನದಲ್ಲಿ ವಿಜೃಂಭಣೆ ಯಿಂದ ನಡೆಯಿತು.
ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (KSSAP)ದ ಅಧ್ಯಕ್ಷೆ ರಾಣಿ ಪುಷ್ಪಲತಾ ಅವರ ಸಾರಥ್ಯದಲ್ಲಿ ನಡೆದ ಈ ಸಮಾರಂಭವನ್ನು ಮಂಗಳೂರಿನ ಕಣಚೂರು ಆಯುರ್ವೇದ ಕಾಲೇಜಿನ ಪ್ರಧಾನ ಸಲಹೆಗಾರ ಡಾ ಸುರೇಶ ನೆಗಳಗುಳಿಯವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಅವರು ಕುವೆಂಪು ಅವರ ಬಗ್ಗೆ ಮಾತನಾಡಿ ವಿಶ್ವ ಮಾನವಧರ್ಮ ಕ್ಕೆ ಮಿಗಿಲಾದ ಧರ್ಮ ಬೇರೆ ಇಲ್ಲ ಎನ್ನುತ್ತಾ ಸ್ವರಚಿತ ಕವನಗಳನ್ನು ವಾಚಿಸಿದರು. ರಾಣಿ ಪುಷ್ಪಲತಾ ದೇವಿಯವರು ಅಧ್ಯಕ್ಷತೆ ವಹಿಸಿದ್ದು ಕುವೆಂಪು ಅವರ ಬಗೆಗೆ ಸವಿವಾರವಾಗಿ ಮಾತನಾಡಿದರು.

ಸಮಾಜಿಕ ಚಿಂತಕ ರಂಜನ್ ಕುಮಾರ್, ಶಿಕ್ಷಕಿ ಕವಯಿತ್ರಿ ಶರಣ್ಯ ಬೆಳುವಾಯಿ, NSCDF ಅಧ್ಯಕ್ಷ ಗಂಗಾಧರ ಗಾಂಧೀ, ಮತ್ತು NSCDF ಅಂತಾರಾಷ್ಟ್ರೀಯ ವಕ್ತಾರ ಕೆ.ಎಂ.ಇಲಿಯಾಸ್ ಮುಖ್ಯ ಅತಿಥಿಗಳಾಗಿದ್ದರು. ಬಳಿಕ ನಡೆದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಮಣಿಪಾಲದ ಹಿಪ್ನೋಥೆರಪಿಸ್ಟ್ ಕವಯಿತ್ರಿ ಜ್ಯೋತಿ ಮಹದೇವ್ ವಹಿಸಿದ್ದರು. ಅವರು ಕುವೆಂಪು ಹಾಗೂ ಕಾವ್ಯಗಳ ಕುರಿತು ಮಾತನಾಡಿದರು. ಇದಲ್ಲದೆ ರಾಣಿ ಪುಷ್ಪಲತಾ ದೇವಿಯವರು ನೆಗಳಗುಳಿ ಹಾಗೂ ಜ್ಯೋತಿ ಮಹದೇವ್ ರನ್ನು ಶಾಲು ಹಾರ ಪೇಟ ನೆನಪಿನ ಕಾಣಿಕೆ ಸಹಿತವಾಗಿ ಗೌರವಿಸಿದರು.
ಕವಿಗಳಾದ ಅಶ್ವಿನಿ ಕೊಂಜಾಡಿ, ,ವಾಣಿಶ್ರೀ ಅಶೋಕ್ ಐತಾಳ್ ಕೆ , ಡಾ. ಪ್ಲಾವಿಯ ಕ್ಯಾಸ್ಟಲಿನೊ , ಮಂಜುನಾಥ್ ಗುಂಡ್ಮಿ, ಶಾಲಿನಿ ಕೆಮ್ಮಣ್ಣು, ಗಿರೀಶ್ ಪೆರಿಯಡ್ಕ, ಆಂಟೋನಿ ಲೂಯಿಸ್ ಮಣಿಪಾಲ, ಮಾರುತಿ ಕೆ.ಪಿ., ಮಾಲತಿ ರಮೇಶ್ ಕೆಮ್ಮಣ್ಣು, ಅವನೀಶ್ ಐತಾಳ್ ಪಿ, ಆಯಿಷಾ ಪೆರ್ನೆ, ವಿನೋದಾ ಪ್ರಕಾಶ್ ಪಡುಬಿದ್ರಿ, ಸುಮಾ ಕಿರಣ್, ಜಯಂತಿ ಎಸ್. ನಂದಳಿಕೆ, ಸುಲೋಚನ ನವೀನ್, ತನ್ಸೀರಾ ಆತೂರ್, ಸುಮಯ್ಯಾ ಎಂ. ಪಾಟೀಲ್ ದೇರಳಕಟ್ಟೆ, ಆಕೃತಿ ಐ.ಎಸ್. ಭಟ್, ಮೂಗಪ್ಪ ಗಾಳೇರ, ಪೂರ್ಣಿಮಾ ಅನಿಲ್ ಮಣಿಪಾಲ, ಸ್ಮಿತಾ ಅಶೋಕ್ ಪರ್ಕಳ, ಮಂಡ್ಯ ಅನಾರ್ಕಲಿ ಸಲೀಂ ಮಂಗಳೂರು,ಗಂಗಾಧರ ಗಾಂಧಿ ಮತ್ತಿತರರು ಕಾವ್ಯವಾಚನ ಮಾಡಿದರು. ಭಾಗವಹಿಸಿದ ಕವಿಗಳೆಲ್ಲರಿಗೂ ಪ್ರಶಂಶನ ಪತ್ರ ಹಾಗೂ ಕೃತಿಗಳನ್ನು ನೀಡಿ ಗೌರವಿಸಲಾಯಿತು. ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಣೆ ಗೈದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























