9:54 AM Wednesday 20 - August 2025

ಅದಾನಿ ಕುರಿತ ವರದಿ: ‘ನಮಗೆ ಹೆಮ್ಮೆ ಇದೆ’ ಎಂದ ಹಿಂಡನ್‌ಬರ್ಗ್‌

02/07/2024

ಅದಾನಿ ಕಂಪನಿಗಳ ಬಗ್ಗೆ ಕಳೆದ ವರ್ಷ ಬಿಡುಗಡೆ ಮಾಡಲಾಗಿದ್ದ ಸಂಶೋಧನಾ ವರದಿಯ ಬಗ್ಗೆ ಹಿಂಡನ್‌ಬರ್ಗ್‌ ಪ್ರತಿಕ್ರಿಯೆ ನೀಡಿದೆ. “ಅದಾನಿ ಕುರಿತ ನಮ್ಮ ಸಂಶೋಧನೆ ಬಗ್ಗೆ ಅತ್ಯಂತ ಹೆಮ್ಮೆ ಇದೆ” ಎಂದು ಸೆಬಿಗೆ ಹಿಂಡನ್‌ಬರ್ಗ್‌ ಹೇಳಿದೆ.

2023ರ ಜನವರಿಯಲ್ಲಿ ಅದಾನಿ ಸಮೂಹ ಕಂಪನಿಗಳ ಬಗ್ಗೆ ಸಂಶೋಧವಾ ವರದಿ ಬಿಡುಗಡೆ ಮಾಡಿದ್ದ ಹಿಂಡನ್‌ಬರ್ಗ್‌, ಅದಾನಿ ಕಂಪನಿಯು ಷೇರು ಮಾರುಕಟ್ಟೆಯನ್ನು ತಿರುಚಿದೆ ಹಾಗೂ ಲೆಕ್ಕಪತ್ರಗಳನ್ನು ವಂಚಿಸಿದೆ ಎಂದು ತಿಳಿಸಿತ್ತು.

ವರದಿ ಬಿಡುಗಡೆಯಾದ ನಂತರ ಆರೋಪಗಳನ್ನು ನಿರಾಕರಿಸಿದರೂ ಸಹ ಅದಾನಿ ಸಮೂಹದ ಷೇರು ಮಾರುಕಟ್ಟೆ 150 ಬಿಲಿಯನ್‌ ಡಾಲರ್‌ವರೆಗೆ ಕುಸಿದಿತ್ತು. ನಂತರ ಅದಾನಿ ಸಂಸ್ಥೆಗಳ ವಿರುದ್ಧ ಕೈಗೊಳ್ಳಲಾಗಿದ್ದ ತನಿಖೆಯು ಆಧಾರರಹಿತ ಎಂದು ಹೇಳಲಾಗಿತ್ತು.
46 ಪುಟಗಳ ಶೋಕಾಸ್‌ ನೋಟಿಸ್‌ಗೆ ಬ್ಲಾಗ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಹಿಂಡನ್‌ಬರ್ಗ್ ಇದೊಂದು ಅಸಂಬದ್ಧ ಎಂದು ತಿಳಿಸಿದೆ.

“ಪೂರ್ವ ನಿರ್ದೇಶಿತ ಉದ್ದೇಶವನ್ನು ಪೂರೈಸಲು ರೂಪಿಸಿರುವ ಇದನ್ನು ನಾವು ಅಸಂಬದ್ಧೆ ಎಂದು ಭಾವಿಸುತ್ತೇವೆ. ಭ್ರಷ್ಟಾಚಾರವನ್ನು ಬಯಲಿಗೆಳೆಯುವವರನ್ನು ಬೆದರಿಸಿ ಮೌನಗೊಳಿಸುವ ಪ್ರಯತ್ನ ಇದಾಗಿದೆ. ಭಾರತದ ಅತ್ಯಂತ ಪ್ರಬಲ ಸಂಸ್ಥೆಯೊಂದು ವಂಚನೆಯಸಗಿದೆ” ಎಂದು ಹಿಂಡನ್‌ಬರ್ಗ್‌ ಆರೋಪಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version