ಕರೆಂಟ್ ಶಾಕ್ ಗೊಳಗಾಗಿ ಕಾಲು ಸ್ವಾಧೀನ ಕಳೆದುಕೊಂಡಿದ್ದ ನವಿಲಿನ ರಕ್ಷಣೆ

peacock
15/09/2023

ಚಾಮರಾಜನಗರ: ವಿದ್ಯುತ್ ಪ್ರವಹಿಸಿ ಎರಡು ಕಾಲು ಸ್ವಾದೀನ ಕಳೆದುಕೊಂಡು ನರಳುತ್ತಿದ್ದ ನವಿಲನ್ನು ರಕ್ಷಿಸಿರುವ ಘಟನೆ ಚಾಮರಾಜನಗರದ ರಾಮಸಮುದ್ರದದ ತೋಟದಲ್ಲಿ ನಡೆದಿದೆ.

ರಾಮಸಮುದ್ರದದ ಮಹಾದೇವಪ್ಪ ಎಂಬವರ ತೋಟದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಬಿದ್ದು ಒದ್ದಾಡುತ್ತಿದ್ದ ಮಾಹಿತಿ ಅರಿತ ಉರಗ ರಕ್ಷಕ ಸ್ನೇಕ್ ಚಾಂಪ್ ತೆರಳಿ ನವಿಲನ್ನು ರಕ್ಷಣೆ ಮಾಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ನೆರವು ಪಡೆದು ಚಾಮರಾಜನಗರದ ಪಶು ಆರೋಗ್ಯ ಕೇಂದ್ರದಲ್ಲಿ ನವಿಲಿಗೆ ನಿರಂತರ 3 ತಾಸು ಚಿಕಿತ್ಸೆ ಕೊಟ್ಟು ಆರೈಕೆ ಮಾಡಿದ್ದು ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ನವಿಲು ಆರೈಕೆ ಬಳಿಕ ಚೇತರಿಸಿಕೊಂಡಿದೆ.

ಗ್ಲೂಕೋಸ್, ಇಂಜೆಕ್ಷನ್ ಮೂಲಕ ನವಿಲು ಚೇತರಿಕೆ ಕಂಡ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ರಾಷ್ಟ್ರಪಕ್ಷಿಯನ್ನು ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಕರೆಂಟ್ ಶಾಕಿಗೆ ಒಳಗಾಗಿದ್ದ ನವಿಲು ಕೊನೆಗೂ ಪ್ರಾಣಾಪಾಯದಿಂದ ಬಚಾವಾಗಿದೆ.

ಇತ್ತೀಚಿನ ಸುದ್ದಿ

Exit mobile version